alex Certify ಪ್ಯಾಂಟ್ ಸೇರಿದ್ದ ಹಾವು: ಜೀವ ರಕ್ಷಣೆಗೆ 7 ಗಂಟೆ ನಿಂತಿದ್ದ ಯುವಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಯಾಂಟ್ ಸೇರಿದ್ದ ಹಾವು: ಜೀವ ರಕ್ಷಣೆಗೆ 7 ಗಂಟೆ ನಿಂತಿದ್ದ ಯುವಕ…!

ಹಾವು ಕಂಡ್ರೆ ಹೌಹಾರುವವರೇ ಜಾಸ್ತಿ. ಅದ್ರಲ್ಲೂ ಹಾವು ಪ್ಯಾಂಟ್ ಒಳಗೆ ಹೊಕ್ಕಿದೆ ಎಂಬುದು ಗೊತ್ತಾದ್ರೆ ಅನೇಕರಿಗೆ ಹೃದಯಾಘಾತವಾಗುತ್ತದೆ.

ಆದ್ರೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಪ್ಯಾಂಟ್  ಒಳಗೆ ಹಾವು ಹೋಗಿದ್ದು ಗೊತ್ತಾದ ಮೇಲೆ ಹಾವಿನಿಂದ ರಕ್ಷಿಸಿಕೊಳ್ಳಲು ಸತತ 7 ಗಂಟೆಗಳ ಕಾಲ ನಿಂತಿದ್ದಾನೆ.

ಘಟನೆ ಉತ್ತರ ಪ್ರದೇಶದ ಮಿರ್ಜಾಪುರದ ಸಿಕಂದರ್‌ಪುರ ಗ್ರಾಮದಲ್ಲಿ ನಡೆದಿದೆ. ವಿದ್ಯುತ್ ಕಂಬಗಳು, ತಂತಿ ಹಾಕುವ ಕಾರ್ಮಿಕ ಲವ್ ಕೇಶ್ ಕುಮಾರ್ ಕೆಲಸ ಮುಗಿಸಿ ಮಲಗಿದ್ದ. ಈ ವೇಳೆ ಆತನ ಪ್ಯಾಂಟ್ ಒಳಗೆ ಹಾವು ಹೊಕ್ಕಿದೆ. ಹಾವು ಪ್ಯಾಂಟ್ ಒಳಗೆ ಹೋಗಿರುವುದು ಗೊತ್ತಾಗ್ತಿದ್ದಂತೆ ನಿಧಾನವಾಗಿ ಎದ್ದು ನಿಂತ ಲವ್ ಕೇಶ್, ಕಂಬ ಹಿಡಿದು 7 ಗಂಟೆ ನಿಂತಿದ್ದಾನೆ.

ಬೆಳಿಗ್ಗೆ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಹಾವು ತಜ್ಞರು, ಲವ್ ಕೇಶ್ ಪ್ಯಾಂಟ್ ಕತ್ತರಿಸಿ ಹಾವನ್ನು ಹೊರ ತೆಗೆದಿದ್ದಾರೆ. ಈ ಸುದ್ದಿ ಗೊತ್ತಾಗ್ತಿದ್ದಂತೆ ಸ್ಥಳೀಯ ಅಧಿಕಾರಿಗಳು ಸೇರಿದಂತೆ ಸ್ಥಳೀಯರು ಅಲ್ಲಿ ಜಮಾಯಿಸಿದ್ದರು. ಇದ್ರ ವಿಡಿಯೋ ಈಗ ವೈರಲ್ ಆಗಿದೆ. ಏಳು ಗಂಟೆಗಳ ಕಾಲ ಪ್ಯಾಂಟ್ ಒಳಗಿದ್ದರೂ ಹಾವು ಕಚ್ಚದಿರುವುದು ಖುಷಿ ಸುದ್ದಿ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...