ಸಿಸೇರಿಯನ್ ಮೂಲಕ ಮಹಿಳೆಗೆ ಹೆರಿಗೆ ಮಾಡಿಸಿದ ವೈದ್ಯರು ಯಡವಟ್ಟು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಹೊಟ್ಟೆಯಲ್ಲಿಯೇ ಬಟ್ಟೆ ಬಿಟ್ಟಿದ್ದಾರೆ. ಮಹಿಳೆ ಆಸ್ಪತ್ರೆಯಿಂದ ಮನೆಗೆ ಬಂದ್ಮೇಲೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. 25 ದಿನಗಳ ನಂತ್ರ ಹೊಟ್ಟೆಯಲ್ಲಿ ಬಟ್ಟೆಯಿರುವುದು ಗೊತ್ತಾಗಿದೆ. ಈ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ನಡೆದಿದೆ.
ಆಗಸ್ಟ್ 23 ರಂದು ಗರ್ಭಿಣಿ ಮಾಯಾಬಾಯಿ ಆರ್ಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನ, ಮಾಯಾಬಾಯಿಗೆ ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ನಂತರ ಮನೆಗೆ ಹೋದ ಮಹಿಳೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಗ್ಯಾಸ್ ಕಾರಣಕ್ಕೆ ಹೊಟ್ಟೆ ನೋವಾಗಿದೆ ಎಂದು ಮಾಯಾಬಾಯಿ ಸುಮ್ಮನಾಗಿದ್ದಳು.
ಹೊಟ್ಟೆ ನೋವು ಹೆಚ್ಚಾಗ್ತಿದ್ದಂತೆ ಸೋನೋಗ್ರಫಿ ಮಾಡಲಾಗಿದೆ. ಆಗ ಹೊಟ್ಟೆಯಲ್ಲಿ ಬಟ್ಟೆಯಿರುವುದು ಗೊತ್ತಾಗಿದೆ. ನಂತ್ರ ವೈದ್ಯರು ಮತ್ತೆ ಶಸ್ತ್ರಚಿಕಿತ್ಸೆ ನಡೆಸಿ ಬಟ್ಟೆ ಹೊರಗೆ ತೆಗೆದಿದ್ದಾರೆ.