alex Certify ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಹೊಟ್ಟೆಯಲ್ಲೇ ಬಿಟ್ಟಿದ್ರು ಬಟ್ಟೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಹೊಟ್ಟೆಯಲ್ಲೇ ಬಿಟ್ಟಿದ್ರು ಬಟ್ಟೆ….!

सिजेरियन ऑपरेशन के बाद पेट में छूट गया था कपड़ा, 25 दिन बाद निकाला गया

ಸಿಸೇರಿಯನ್ ಮೂಲಕ ಮಹಿಳೆಗೆ ಹೆರಿಗೆ ಮಾಡಿಸಿದ ವೈದ್ಯರು ಯಡವಟ್ಟು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಹೊಟ್ಟೆಯಲ್ಲಿಯೇ ಬಟ್ಟೆ ಬಿಟ್ಟಿದ್ದಾರೆ. ಮಹಿಳೆ ಆಸ್ಪತ್ರೆಯಿಂದ ಮನೆಗೆ ಬಂದ್ಮೇಲೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. 25 ದಿನಗಳ ನಂತ್ರ ಹೊಟ್ಟೆಯಲ್ಲಿ ಬಟ್ಟೆಯಿರುವುದು ಗೊತ್ತಾಗಿದೆ. ಈ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ನಡೆದಿದೆ.

ಆಗಸ್ಟ್ 23 ರಂದು ಗರ್ಭಿಣಿ ಮಾಯಾಬಾಯಿ ಆರ್ಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನ, ಮಾಯಾಬಾಯಿಗೆ ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ನಂತರ ಮನೆಗೆ ಹೋದ ಮಹಿಳೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಗ್ಯಾಸ್ ಕಾರಣಕ್ಕೆ ಹೊಟ್ಟೆ ನೋವಾಗಿದೆ ಎಂದು ಮಾಯಾಬಾಯಿ ಸುಮ್ಮನಾಗಿದ್ದಳು.

ಹೊಟ್ಟೆ ನೋವು ಹೆಚ್ಚಾಗ್ತಿದ್ದಂತೆ ಸೋನೋಗ್ರಫಿ ಮಾಡಲಾಗಿದೆ. ಆಗ ಹೊಟ್ಟೆಯಲ್ಲಿ ಬಟ್ಟೆಯಿರುವುದು ಗೊತ್ತಾಗಿದೆ. ನಂತ್ರ ವೈದ್ಯರು ಮತ್ತೆ ಶಸ್ತ್ರಚಿಕಿತ್ಸೆ ನಡೆಸಿ ಬಟ್ಟೆ ಹೊರಗೆ ತೆಗೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...