alex Certify ನಾನು ಪ್ರಧಾನಿ ಮೋದಿಯವರ ಹನುಮ ಎಂದ ಪಾಸ್ವಾನ್ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾನು ಪ್ರಧಾನಿ ಮೋದಿಯವರ ಹನುಮ ಎಂದ ಪಾಸ್ವಾನ್ ಪುತ್ರ

ಪಾಟ್ನಾ: ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಹೊಸ ಹೊಸ ರಾಜಕೀಯ ತಂತ್ರಗಾರಿಕೆ ಹೆಣೆಯುತ್ತಿರುವ ಲೋಕ ಜನಶಕ್ತಿ ಪಕ್ಷ(ಎಲ್ ಜೆ ಪಿ)ದ ನಾಯಕ ಚಿರಾಗ್ ಪಾಸ್ವಾನ್, ತಮ್ಮನ್ನು ತಾವು ಪ್ರಧಾನಿ ನರೇಂದ್ರ ಮೋದಿ ಅವರ ಹನುಮನಿದ್ದಂತೆ ಎಂದು ಕರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ತನ್ನನ್ನು ತಾನು ನಿರೂಪಿಸಿಕೊಳ್ಳಲು ಎದೆಬಗೆದು ಬೇಕಿದ್ದರೂ ತೋರಿಸುವುದಾಗಿಯೂ ಹೇಳಿದ್ದಾರೆ.

ನಾನು ಪ್ರಚಾರಕ್ಕಾಗಿ ಪ್ರಧಾನಿ ಮೋದಿ ಅವರ ಫೋಟೋ ಬಳಸುವ ಅಗತ್ಯವಿಲ್ಲ. ಅವರು ನನ್ನ ಹೃದಯದಲ್ಲೇ ನೆಲೆಸಿದ್ದಾರೆ. ನಾನವರ ಹನುಮ. ಬೇಕಿದ್ದರೆ ಎದೆಬಗೆದು ತೋರಿಸಲೂ ಸಿದ್ಧ ಎಂದಿದ್ದಾರೆ.

ಬಿಜೆಪಿ ನಾಯಕರ ಪರ ಮಾತನಾಡುತ್ತಿರುವ ಪಾಸ್ವಾನ್, ನಿತೀಶ್ ಕುಮಾರ್ ರನ್ನು ಜರಿಯಲಾರಂಭಿಸಿದ್ದಾರೆ. ನಮಗೂ ಎಲ್ ಜೆ ಪಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ನಾಯಕರು ಸ್ಪಷ್ಟನೆ ನೀಡಿದ್ದಾರೆ. ಮತದಾರರಲ್ಲಿ ಗೊಂದಲ ಸೃಷ್ಟಿಸುವ ಇಂತಹ ಹೇಳಿಕೆಗಳನ್ನು ಸಹಿಸುವುದಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...