alex Certify ತ್ವರಿತ ಸಾಲ ನೀಡಿ ಕಿರುಕುಳ ನೀಡುತ್ತಿದ್ದ ಮೊಬೈಲ್​ ಅಪ್ಲಿಕೇಶನ್​ ಕಂಪನಿ ಮೇಲೆ ಖಾಕಿ ದಾಳಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತ್ವರಿತ ಸಾಲ ನೀಡಿ ಕಿರುಕುಳ ನೀಡುತ್ತಿದ್ದ ಮೊಬೈಲ್​ ಅಪ್ಲಿಕೇಶನ್​ ಕಂಪನಿ ಮೇಲೆ ಖಾಕಿ ದಾಳಿ…!

ತ್ವರಿತವಾಗಿ ಸಾಲ ನೀಡುವ ಅಪ್ಲಿಕೇಶನ್​ ಮೂಲಕ ಜನರನ್ನ ವಂಚಿಸುತ್ತಿದ್ದ ಚೀನಾದ ಪ್ರಜೆ ಸೇರಿದಂತೆ ನಾಲ್ವರನ್ನ ಸೈಬರಾಬಾದ್​​ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ತೆಲಂಗಾಣದಲ್ಲಿ ಸೈಬರಾಬಾದ್​ನಲ್ಲಿದ್ದ ಕ್ಯುಬೆವೊ ಟೆಕ್ನಾಲಜಿ ಪ್ರೈವೇಟ್​ ಲಿಮಿಟೆಡ್​(ಸ್ಕೈಲೈನ್​) ಎಂಬ ಕಾಲ್​ಸೆಂಟರ್​ ಮೇಲೆ ದಾಳಿ ಮಾಡಿದ ಪೊಲೀಸರು ಈ ನಾಲ್ವರನ್ನ ಬಂಧಿಸಿದ್ದಾರೆ.

ಪೊಲೀಸರು ಹೇಳುವಂತೆ ಈ ಕಂಪನಿಯ ಮುಖ್ಯ ಕಚೇರಿ ದೆಹಲಿಯಲ್ಲಿ ಸ್ಕೈಲೈನ್​ ಇನ್ನೋವೇಶನ್ಸ್ ಟೆಕ್ನಾಲಜೀಸ್​ ಇಂಡಿಯಾ ಪ್ರೈವೇಟ್​ ಲಿಮಿಟೆಡ್​ ಎಂಬ ಹೆಸರಿನಲ್ಲಿದೆ.

ಈ ಕಂಪನಿ ಮೊಬೈಲ್​ ಅಪ್ಲಿಕೇಶನ್​ ಹೊಂದಿದ್ದು ಜನರಿಗೆ ತ್ವರಿತ ಸಾಲವನ್ನ ನೀಡುತ್ತೆ. ಆದರೆ ಬಡ್ಡಿ, ಸಂಸ್ಕರಣಾ ಶುಲ್ಕ, ಜಿಎಸ್​ಟಿ, ಸಾಲದ ಅವಧಿ ಮುಗಿದ ಬಳಿಕ 1 ಪ್ರತಿಶತ ಚಕ್ರಬಡ್ಡಿ ಸೇರಿದಂತೆ ಹಲವಾರು ನಿಯಮಗಳನ್ನೊಡ್ಡಿ ಜನರಿಂದ ದುಪ್ಪಟ್ಟು ಹಣ ಸಂಗ್ರಹಿಸಲಾಗುತ್ತಿತ್ತು. ಕಾಲ್​ಸೆಂಟರ್​ ಮೂಲಕ ಗ್ರಾಹಕರಿಗೆ ಕರೆ ಮಾಡಿ ನಿಂದನೆ ಮಾಡೋದು ಹಾಗೂ ಕುಟುಂಬ ಸದಸ್ಯರಿಗೆ ನಕಲಿ ಸಾಲದ ನೋಟಿಸ್​ಗಳನ್ನ ಕಳುಹಿಸೋ ಮೂಲಕ ಕಿರುಕುಳ ನೀಡುತ್ತಿದ್ದರು. ಈ ಕಂಪನಿ ವಿರುದ್ಧ 8 ದೂರುಗಳನ್ನ ಸ್ವೀಕರಿಸಿದ್ದ ಸೈಬರಾಬಾದ್​ ಸೈಬರ್​ ಕ್ರೈಂ ವಿಭಾಗದ ಪೊಲೀಸರು ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...