alex Certify ಕೊರೋನಾ ಆತಂಕ, ಗಡಿಯಲ್ಲಿ ಉದ್ವಿಗ್ನತೆ: ಭಾರತೀಯ ಸೈನಿಕರ ವಶ ವದಂತಿ ಬೆನ್ನಲ್ಲೇ ಚೀನಾದಿಂದ ಮತ್ತೊಂದು ಅಚ್ಚರಿಯ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಆತಂಕ, ಗಡಿಯಲ್ಲಿ ಉದ್ವಿಗ್ನತೆ: ಭಾರತೀಯ ಸೈನಿಕರ ವಶ ವದಂತಿ ಬೆನ್ನಲ್ಲೇ ಚೀನಾದಿಂದ ಮತ್ತೊಂದು ಅಚ್ಚರಿಯ ನಿರ್ಧಾರ

Donald Trump: China makes massive cut to car tariffs after truce ...

ನವದೆಹಲಿ: ಲಡಾಖ್ ಸಮೀಪದ ಪ್ಯಾಂಗೋಂಗ್ ಸರೋವರದ ಬಳಿ ಭಾರತೀಯ ಯೋಧರನ್ನು ಚೀನಾ ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿತ್ತು ಎನ್ನುವ ವದಂತಿ ಹರಡಿತ್ತು. ಆದರೆ, ಇದನ್ನು ಭಾರತೀಯ ಸೇನೆ ನಿರಾಕರಿಸಿದೆ. ಇದರ ಬೆನ್ನಲ್ಲೇ ಚೀನಾ ಅಚ್ಚರಿಯ ನಿರ್ಧಾರವನ್ನು ಕೈಗೊಂಡಿದೆ.

ಭಾರತದಲ್ಲಿರುವ ಚೀನಿಯರನ್ನು ಕರೆಸಿಕೊಳ್ಳಲು ವಾಪಸ್ ಕರೆಸಿಕೊಳ್ಳಲು ಚೀನಾ ಸರ್ಕಾರ ತೀರ್ಮಾನ ಕೈಗೊಂಡಿದೆ. ಭಾರತದ ಗಡಿಯಲ್ಲಿ ಉದ್ವಿಗ್ನತೆ ಹಿನ್ನೆಲೆಯಲ್ಲಿ ಚೀನಾ ಈ ನಿರ್ಧಾರ ಕೈಗೊಂಡಿದ್ದು ಚೀನಾ ರಾಯಭಾರ ಕಚೇರಿ ವೆಬ್ ಸೈಟ್ ನಲ್ಲಿ ನೋಟಿಸ್ ನೀಡಲಾಗಿದೆ.

ಭಾರತದಲ್ಲಿರುವ ಚೀನಾದ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು, ಉದ್ಯಮಿಗಳಿಗೆ ವಾಪಸಾಗುವಂತೆ ಸಲಹೆ ನೀಡಲಾಗಿದೆ. ವಿಶೇಷ ವಿಮಾನಗಳ ಮೂಲಕ ವಾಪಸಾಗಲು ಸಲಹೆ ನೀಡಿದ್ದು ಮೇ 27 ರೊಳಗೆ ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಭಾರತದಲ್ಲಿ ಕೋರೋನಾ ಸಾಂಕ್ರಾಮಿಕ ರೋಗದ ಆತಂಕದ ಪರಿಸ್ಥಿತಿ, ಗಡಿಯಲ್ಲಿ ಉದ್ವಿಗ್ನತೆ ಇರುವ ಬೆನ್ನಲ್ಲೇ ಚೀನಾ ನಾಗರಿಕರನ್ನು ಭಾರತದಿಂದ ಸ್ಥಳಾಂತರಿಸಲು ಯೋಚಿಸುತ್ತಿದೆ ಎಂದು ನವದೆಹಲಿಯ ಚೀನಾ ರಾಯಭಾರ ಕಚೇರಿ ನೀಡಿರುವ ನೋಟಿಸ್ ನಲ್ಲಿ ತಿಳಿಸಲಾಗಿದೆ. ದೂತಾವಾಸದ ವೆಬ್ ಸೈಟ್ ನಲ್ಲಿ ಭಾರತದಲ್ಲಿರುವ ಚೀನಾ ನಾಗರಿಕರು, ಪ್ರವಾಸಿಗರು ಮತ್ತು ವಿದ್ಯಾರ್ಥಿಗಳು ವಾಪಸಾಗಲು ಮೇ 27 ರೊಳಗೆ ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...