ನವದೆಹಲಿ: ಪೂರ್ವ ಲಡಾಖ್ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿದೆ. 53 ವರ್ಷಗಳ ಬಳಿಕ ಚೀನಾದಿಂದ ಈ ನೀಚ ಕೃತ್ಯ ನಡೆದಿದ್ದು, 20 ಭಾರತೀಯ ಯೋಧರ ಹತ್ಯೆ ಮಾಡಲಾಗಿದೆ.
ಭಾರತೀಯ ಸೇನೆಯಿಂದ ಪ್ರತಿದಾಳಿ ನಡೆಸಿದ್ದು 43 ಚೀನಾ ಯೋಧರು ಸಾವನ್ನಪ್ಪಿದ್ದಾರೆ. ಗುಂಡಿನ ಚಕಮಕಿ ನಡೆದಿಲ್ಲ. ಕಲ್ಲು, ರಾಡ್, ಬಡಿಗೆಯಿಂದ ಭಾರತದ ಸೈನಿಕರನ್ನು ಕೊಲೆ ಮಾಡಲಾಗಿದ್ದು, ಉಭಯ ದೇಶಗಳ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಇದೆ.
ಭಾರತ-ಚೀನಾ ಗಡಿಯಲ್ಲಿ ಸಂಘರ್ಷ ಏರ್ಪಟ್ಟು ಎರಡು ದೇಶಗಳ ಯೋಧರು ಸಾವಿಗೀಡಾದ ಘಟನೆ ಕುರಿತಂತೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದ್ದು ಎರಡು ದೇಶಗಳು ತಾಳ್ಮೆ ವಹಿಸಬೇಕು ಎಂದು ಹೇಳಿದೆ.