alex Certify ಡಿಜಿಟಲ್ ಸ್ಟ್ರೈಕ್ ಬೆನ್ನಲ್ಲೇ ಚೀನಾಗೆ ತಿರುಗೇಟು ನೀಡಲು ಭಾರತೀಯ ಸೇನೆಗೆ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಜಿಟಲ್ ಸ್ಟ್ರೈಕ್ ಬೆನ್ನಲ್ಲೇ ಚೀನಾಗೆ ತಿರುಗೇಟು ನೀಡಲು ಭಾರತೀಯ ಸೇನೆಗೆ ಸೂಚನೆ

ನವದೆಹಲಿ: ಬರೋಬ್ಬರಿ 118 ಆಪ್ ಗಳನ್ನು ಬ್ಯಾನ್ ಮಾಡಿದ ಬಳಿಕ ಚೀನಾಗೆ ಮತ್ತೆ ಶಾಕ್ ನೀಡಲು ಭಾರತ ಮುಂದಾಗಿದೆ. ಚೀನಾ ಗಡಿಯಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ಉಂಟಾಗಿದ್ದು, ಗಡಿಯುದ್ದಕ್ಕೂ ಹೈಅಲರ್ಟ್ ಘೋಷಿಸಲಾಗಿದೆ.

ಮತ್ತೆ ಏನಾದ್ರೂ ಚೀನಾ ದುಸ್ಸಾಹಸಕ್ಕೆ ಇಳಿದರೆ ತಿರುಗೇಟು ನೀಡಲು ಭಾರತೀಯ ಸೇನೆಗೆ ಸೂಚನೆ ನೀಡಲಾಗಿದೆ. ಕಮಾಂಡರ್ ಗಳ ಮಟ್ಟದ ಮಾತುಕತೆ ಫಲ ಕಾಣದ ಹಿನ್ನೆಲೆಯಲ್ಲಿ ಅರುಣಾಚಲ ಪ್ರದೇಶಕ್ಕೆ ಹೆಚ್ಚಿನ ಯೋಧರನ್ನು ಭಾರತ ರವಾನಿಸಿದೆ.

ಈ ನಡುವೆ ಪ್ಯಾಂಗಾಂಗ್ ಲೇಕ್ ಉತ್ತರದ ಬೆಟ್ಟಗಳನ್ನು ಭಾರತ ನಿಯಂತ್ರಣಕ್ಕೆ ಪಡೆದು ಮೇಲುಗೈ ಸಾಧಿಸಿದೆ. ಚೀನಾ ಯೋಧರು ನುಗ್ಗದಂತೆ ಕಣ್ಗಾವಲು ಇರಿಸಲಾಗಿದೆ. ರಕ್ಷಣಾ, ಗೃಹಸಚಿವಾಲಯ ಹೈಅಲರ್ಟ್ ಘೋಷಿಸಿದೆ. ಭದ್ರತಾ ಪಡೆಗಳು ಸರ್ವ ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...