14 ವರ್ಷದ ಒಳಗಿನ ಮಕ್ಕಳಿಗೆ ಕೊರೊನಾ ಹರಡುವ ಸಾಧ್ಯತೆ ಕಡಿಮೆ ಇದೆ ಎಂದು ಅಧ್ಯಯನ ತಿಳಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ಮಕ್ಕಳ ಮೇಲೆ ಕೊರೊನಾ ವೈರಸ್ ಬೀರುವ ಪರಿಣಾಮಗಳನ್ನ ಕಡಿಮೆ ಮಾಡುವ ನಿಟ್ಟಿನಲ್ಲಿ ಯಾವುದೇ ಕ್ರಿಯಾ ಯೋಜನೆಯನ್ನ ಸರ್ಕಾರ ಇಲ್ಲಿಯವರೆಗೆ ರೂಪಿಸಿಲ್ಲ ಎಂದು ಲೋಕಸಭೆಗೆ ಮಾಹಿತಿ ನೀಡಿದ್ರು.
ಅತ್ಯಂತ ವಿರಳ ಪ್ರಕರಣಗಳಲ್ಲಿ ಮಾತ್ರ ತೀವ್ರ ಅನಾರೋಗ್ಯವನ್ನ ಗುರುತಿಸಲಾಗಿದೆ. ಇದು ಸಾಮಾನ್ಯವಾಗಿ ಸೋಂಕಿಗೊಳಗಾದ ಮೂರರಿಂದ ಆರು ವಾರಗಳ ಬಳಿಕ ಉಂಟಾಗುತ್ತೆ ಎಂದು ಹೇಳಿದ್ರು.
ಮಕ್ಕಳ ಮೇಲೆ ಕೊರೊನಾ ಬೀರುವ ದೀರ್ಘಕಾಲದ ಪರಿಣಾಮದ ಮೇಲೆ ಏಮ್ಸ್ನ ಮಕ್ಕಳ ತಜ್ಞರು ಡಾಕ್ಯೂಮೆಂಟ್ ತಯಾರಿಸುತ್ತಿದ್ದಾರೆ ಎಂದು ಹರ್ಷವರ್ಧನ್ ಹೇಳಿದ್ದಾರೆ.