ಬಾಯುಸಿರಿನಲ್ಲಿ, ಮೂಗಿನಲ್ಲಿ ಕೊಳಲು ನುಡಿಸುವರನ್ನು ಕಂಡಿದ್ದೇವೆ. ಆದರೆ, ಈತ ಕೊಳಲನ್ನು ಕೈಯಲ್ಲಿ ಹಿಡಿದು ಗಾಳಿಯಲ್ಲಿ ಬೀಸಿದರೆ ಸಾಕು ನಾದ ಹೊಮ್ಮುತ್ತದೆ.
ಎಲ್ಲಾ ಕೊಳಲಿನಂತೆ ಇದೂ ಬಿದಿರಿನಿಂದಲೇ ತಯಾರಾದದ್ದು. ಆದರೂ ಇದನ್ನು ಬಾಯಿಂದ ಊದುವುದು ಬೇಡ. ಗಾಳಿಯಲ್ಲಿ ಗಿರಕಿ ಹೊಡೆಸಿದರೆ, ಧ್ವನಿ ಹೊರಡುತ್ತದೆ.
ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ‘ಗುಡ್ ನ್ಯೂಸ್’
ಛತ್ತೀಸ್ಗಢದ ಗೊಂಡ ಆದಿವಾಸಿ ಸಮುದಾಯದ ಮಣಿರಾಮ್ ಮಾಂಡವಿಯ ಈ ಗಿರಕಿ ಹೊಡೆವ ಕೊಳಲ ವಿಡಿಯೋ ವೈರಲ್ ಆಗಿದೆ. ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ ಎಂಬ ಟ್ವಿಟ್ಟರ್ ಖಾತೆ ಮೂಲಕ ಶೇರ್ ಆಗಿರುವ ಈ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಕಾಡಿನ ಮೂಲಕ ಹಾದುಹೋಗುವಾಗ ಪ್ರಾಣಿಗಳಿಂದ ಸುಲಭವಾಗಿ ರಕ್ಷಣೆ ಪಡೆಯಲು ಇದರಿಂದ ಶಬ್ದ ಮಾಡಬಹುದು. ಇಂತಹ ಅನೇಕ ಸಂದರ್ಭಗಳಲ್ಲಿ ಬಳಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
https://twitter.com/PARInetwork/status/1365152311593422850?ref_src=twsrc%5Etfw%7Ctwcamp%5Etweetembed%7Ctwterm%5E1365152311593422850%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fchhattisgarh-mans-swinging-flute-creates-a-melodious-tune-netizens-love-it-watch%2F726142