ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ರೂಬಿಕ್ ಕ್ಯೂಬ್ ಜೋಡಿಸಿದ ಚೆನ್ನೈನ ಶೇಖರ್ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ.
ಚೆನ್ನೈನ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿರುವ 25 ವರ್ಷದ ಶೇಖರ್, ನೀರಿನೊಳಗೆ ಕುಳಿತು 2.17 ನಿಮಿಷದಲ್ಲಿ ಬರೋಬ್ಬರಿ 6 ರೂಬಿಕ್ ಕ್ಯುಬಿಕ್ ನ್ನು ಸರಿಯಾದ ಕ್ರಮದಲ್ಲಿ ಜೋಡಿಸಿದ್ದಾರೆ.
ಈ ಹಿಂದೆ ಮುಂಬೈನ 20 ವರ್ಷದ ಚಿನ್ಮಯ್ ಪ್ರಭು ಸಾಧಿಸಿದ್ದ ದಾಖಲೆಯನ್ನು ಶೇಖರ್ ಮುರಿದಿದ್ದು, ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಕೊರೊನಾ ಇರುತ್ತದೆ, ಹೋಗುತ್ತದೆ. ಆದರೆ, ನಮ್ಮ ಒಳಗಿರುವ ಕ್ರಿಯಾಶೀಲತೆ ಜಾಗೃತವಾಗಿರಬೇಕು. ನನ್ನ ಶಾಲೆಯ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಬೇಕು, ಈ ಮೂಲಕ ಜೀವನದಲ್ಲಿ ಏನೇ ಬಂದರೂ ಎದುರಿಸಬೇಕೆಂಬ ಸಂದೇಶ ನೀಡುವುದು ಉದ್ದೇಶವಾಗಿತ್ತು. 6 ವರ್ಷಗಳ ನಂತರ ದಾಖಲೆ ಮುರಿದಿದ್ದು, ಇಡೀ ಏಷ್ಯಾ ಖಂಡದಲ್ಲಿಯೇ ನಾನು ಮೊದಲಿಗ ಎಂದು ಶೇಖರ್ ಖುಷಿ ಹಂಚಿಕೊಂಡಿದ್ದಾರೆ.