alex Certify ನೀರಿನೊಳಗೆ ರೂಬಿಕ್ ಕ್ಯೂಬ್ ಜೋಡಿಸಿ ಯುವಕನ ವಿಶ್ವ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀರಿನೊಳಗೆ ರೂಬಿಕ್ ಕ್ಯೂಬ್ ಜೋಡಿಸಿ ಯುವಕನ ವಿಶ್ವ ದಾಖಲೆ

Chennai Man Attempts to Break Guinness World Record By Solving ...

ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ರೂಬಿಕ್ ಕ್ಯೂಬ್ ಜೋಡಿಸಿದ ಚೆನ್ನೈನ ಶೇಖರ್ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ.

ಚೆನ್ನೈನ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿರುವ 25 ವರ್ಷದ ಶೇಖರ್, ನೀರಿನೊಳಗೆ ಕುಳಿತು 2.17 ನಿಮಿಷದಲ್ಲಿ ಬರೋಬ್ಬರಿ 6 ರೂಬಿಕ್ ಕ್ಯುಬಿಕ್ ನ್ನು ಸರಿಯಾದ ಕ್ರಮದಲ್ಲಿ ಜೋಡಿಸಿದ್ದಾರೆ.

ಈ ಹಿಂದೆ ಮುಂಬೈನ 20 ವರ್ಷದ ಚಿನ್ಮಯ್ ಪ್ರಭು ಸಾಧಿಸಿದ್ದ ದಾಖಲೆಯನ್ನು ಶೇಖರ್ ಮುರಿದಿದ್ದು, ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಕೊರೊನಾ ಇರುತ್ತದೆ, ಹೋಗುತ್ತದೆ. ಆದರೆ, ನಮ್ಮ ಒಳಗಿರುವ ಕ್ರಿಯಾಶೀಲತೆ ಜಾಗೃತವಾಗಿರಬೇಕು. ನನ್ನ ಶಾಲೆಯ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಬೇಕು, ಈ ಮೂಲಕ ಜೀವನದಲ್ಲಿ ಏನೇ ಬಂದರೂ ಎದುರಿಸಬೇಕೆಂಬ ಸಂದೇಶ ನೀಡುವುದು ಉದ್ದೇಶವಾಗಿತ್ತು.‌ 6 ವರ್ಷಗಳ ನಂತರ ದಾಖಲೆ ಮುರಿದಿದ್ದು, ಇಡೀ ಏಷ್ಯಾ ಖಂಡದಲ್ಲಿಯೇ ನಾನು ಮೊದಲಿಗ ಎಂದು ಶೇಖರ್ ಖುಷಿ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...