ಸೆಲೆಬ್ರಿಟಿ ಬಾಣಸಿಗ ವಿಕಾಸ್ ಖನ್ನಾ ಅವರು ತಮಗೆ ದಿಬ್ಬಾ ರೊಟ್ಟಿ ಮಾಡುವುದನ್ನು ಕಲಿಸಿದವರಿಗೆ ಗುರುದಕ್ಷಿಣೆ ನೀಡಿ ಸುದ್ದಿಯಾಗಿದ್ದಾರೆ.
ಆಂಧ್ರಪ್ರದೇಶದ ಜನಪ್ರಿಯ ತಿಂಡಿ ದಿಬ್ಬಾ ರೊಟ್ಟಿ ಹೇಗೆ ತಯಾರಿಸುವುದು ಎಂದು ಅವರು ವಿಡಿಯೋ ನೋಡಿ ಕಲಿತಿದ್ದರಂತೆ.
ಜಾಲತಾಣದಲ್ಲಿ ಬಂದ ವಿಡಿಯೋ ನೋಡುವ ಮೂಲಕ ದಿಬ್ಬಾ ರೊಟ್ಟಿ ತಯಾರಿಸುವ ತಂತ್ರವನ್ನು ಕಲಿತಿದ್ದೇನೆ ಎಂದು ಹೇಳಿಕೊಂಡಿರುವ ಖನ್ನಾ, ನೆಟ್ಟಿಗರ ಸಹಾಯದಿಂದಲೇ ದಿಬ್ಬಾ ರೊಟ್ಟಿ ತಯಾರಿಸುವ ಆ ವಿಡಿಯೋದಲ್ಲಿರುವ ವ್ಯಕ್ತಿಯನ್ನು ಪತ್ತೆ ಮಾಡಿ ಲಾಕ್ ಡೌನ್ ಸಂದರ್ಭದಲ್ಲಿ ನೆರವು ತಲುಪಿಸಿದ್ದಾರೆ. ಈ ಮಾಸ್ಟರ್ ಚೆಫ್, ಗುರುದಕ್ಷಿಣೆ ನೀಡುವ ಸಂದರ್ಭ ಎಂದೂ ಹೇಳಿಕೊಂಡಿದ್ದಾರೆ.