ದೆಹಲಿಯ ಹಳೆ ಏರಿಯಾಗಳಲ್ಲಿ ಒಂದಾದ ಚಾಂದಿನಿ ಚೌಕ್‌ಗೆ ದೊಡ್ಡ ಮಟ್ಟದಲ್ಲಿ ಫೇಸ್ ಲಿಫ್ಟ್ ಕೆಲಸ ಮಾಡಲಾಗಿದೆ. ಸದಾ ಜನಜಂಗುಳಿ ಹಾಗೂ ವಿಪರೀತ ಟ್ರಾಫಿಕ್‌ನಿಂದ ಗಿಜಿಗುಡುತ್ತಿದ್ದ ಈ ಪ್ರದೇಶಕ್ಕೆ ಹೊಸ ಲುಕ್ ಬಂದಿದೆ.
ಹೊಸದಾಗಿ ಹಾಕಲಾದ ಕಾಂಕ್ರೀಟ್ ಪಥದಲ್ಲಿ ಪಾದಚಾರಿಗಳು ಆರಾಮವಾಗಿ ಓಡಾಡುತ್ತಿರುವ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಯಾವುದೇ ಇ-ರಿಕ್ಷಾಗಳು, ಖಾಸಗಿ ವಾಹನಗಳು ಹಾಗೂ ಕಮರ್ಷಿಯಲ್ ವಾಹನಗಳ ದಟ್ಟಣೆಯಿಂದ ಈ ಪ್ರದೇಶ ಈಗ ಬಹಳ ಮುಕ್ತವಾಗಿ ಕಾಣುತ್ತಿದೆ.
ಇಲ್ಲಿರುವ ಕೆಂಪು ಕೋಟೆ ಹಾಗೂ ಫತೇಹ್‌ಪುರ ಮಸೀದಿ ನಡುವಿನ ಮಾರ್ಗವು ಯಾವಾಗಲೂ ಸಾವಿರಾರು ಜನರಿಂದ ತುಂಬಿಕೊಂಡು ಇರುತ್ತಿತ್ತು. ಈ ಜಾಗವನ್ನು ಕೇವಲ ಪಾದಚಾರಿಗಳಿಗೆ ಮಾತ್ರವೇ ಮುಕ್ತವಾಗಿ ಇರಿಸಲಾಗಿದೆ.