
ಕೋತಿಮರಿಯೊಂದನ್ನು ಸಾಕಿಕೊಂಡು, ಅದರ ಚಿತ್ರಗಳನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರದರ್ಶಿಸುತ್ತಿದ್ದ ಚಂಡೀಗಡ ಮೂಲದ ಕಮಲ್ಜೀತ್ ಸಿಂಗ್ ಎಂಬ ಟ್ಯಾಟೂ ಕಲಾವಿದ ಹಾಗೂ ಆತನ ಮ್ಯಾನೇಜರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಚಂಡೀಗಡದ ಸೆಕ್ಟರ್ 35ರಲ್ಲಿ ಟ್ಯೂಟೂ ಸ್ಟುಡಿಯೋ ಹೊಂದಿರುವ ಈ ಕಲಾವಿದ ತಾನು ಸಾಕಿದ್ದ ಕೋತಿಗೆ ಬಲವಂತವಾಗಿ ಮದ್ಯಪಾನ ಮಾಡಿಸುತ್ತಿದ್ದ ಎಂದು ತಿಳಿದುಬಂದಿದೆ.
ಈತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ಅಡಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅರಣ್ಯ ಉಪ ಸಂರಕ್ಷಕ ಅಬ್ದುಲ್ ಖಯೂಮ್ ತಿಳಿಸಿದ್ದು, ವನ್ಯಜೀವಿಗಳನ್ನು ಸಾಕು ಪ್ರಾಣಿಗಳಂತೆ ಪಳಗಿಸಿ ಮೋಜು ಮಾಡಲು ನೋಡುವ ಪ್ರತಿಯೊಬ್ಬ ಟಿಕ್ ಟಾಕರ್ ಗೂ ಇದೊಂದು ಸಂದೇಶ ಎಂದು ತಿಳಿಸಿದ್ದಾರೆ.