alex Certify BIG NEWS: ಕೊರೊನಾ ಲಸಿಕೆ ಕುರಿತ ನಕಲಿ ಅಪ್ಲಿಕೇಶನ್​ ಬಗ್ಗೆ ಆರೋಗ್ಯ ಸಚಿವಾಲಯದಿಂದ ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಲಸಿಕೆ ಕುರಿತ ನಕಲಿ ಅಪ್ಲಿಕೇಶನ್​ ಬಗ್ಗೆ ಆರೋಗ್ಯ ಸಚಿವಾಲಯದಿಂದ ಎಚ್ಚರಿಕೆ

ಅಪರಿಚಿತರು ಸಿದ್ಧಪಡಿಸಿರುವ ಕೋ – ವಿನ್​ ಹೆಸರಿನ ಅಪ್ಲಿಕೇಶನ್​ನ್ನು ಡೌನ್ ಲೋಡ್​ ಮಾಡಿಕೊಂಡು ಅದರಲ್ಲಿ ತಮ್ಮ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುತ್ತಿರುವವರಿಗೆ ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆಯನ್ನ ನೀಡಿದೆ. ಈ ಅಪ್ಲಿಕೇಶನ್​ಗೂ ಕೇಂದ್ರ ಸರ್ಕಾರದ ಲಸಿಕೆ ಹಂಚಿಕೆ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.

ಕೋ ವಿನ್​ ಹೆಸರು ಹೊಂದಿರುವ ನಕಲಿ ಅಪ್ಲಿಕೇಶನ್​ಗಳನ್ನ ಅಪರಿಚಿತರು ಸಿದ್ಧಪಡಿಸಿದ್ದಾರೆ. ಈ ಅಪ್ಲಿಕೇಶನ್​ ನೋಡಿದ್ರೆ ನಿಮಗೆ ಸರ್ಕಾರದ ಅಪ್ಲಿಕೇಶನ್​ಗಳ ರೀತಿಯಲ್ಲೇ ಭಾಸವಾಗುತ್ತೆ. ಆದರೆ ಇಂತಹ ಅಪ್ಲಿಕೇಶನ್​ಗಳನ್ನ ಡೌನ್​ ಮಾಡುವುದಾಗಲಿ ಇದರಲ್ಲಿ ಯಾವುದೇ ವೈಯಕ್ತಿಕ ಮಾಹಿತಿಗಳನ್ನ ಹಂಚಿಕೊಳ್ಳೋದಾಗಿ ಮಾಡಬೇಡಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಟ್ವೀಟ್​ ಮೂಲಕ ಎಚ್ಚರಿಕೆ ನೀಡಿದೆ.

ಕೊರೊನಾ ಲಸಿಕೆ ವಿಚಾರದಲ್ಲಿ ವೈಯಕ್ತಿಕ ದಾಖಲೆಗಳನ್ನ ಸಲ್ಲಿಕೆ ಮಾಡುವಂತಹ ಅಪ್ಲಿಕೇಶನ್​ಗಳನ್ನ ಬಿಡುಗಡೆ ಮಾಡೋದಾಗಿ ಸರ್ಕಾರ ಹೇಳಿದೆ. ಆದರೆ ಇಲ್ಲಿಯವರೆಗೆ ಇಂತಹ ಆಪ್​ಗಳನ್ನ ನಾವು ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...