ದೇಶದಲ್ಲಿ ಈಗಾಗಲೇ ಕೊರೊನಾ ವ್ಯಾಕ್ಸಿನೇಷನ್ ಡ್ರೈವ್ ಭರದಿಂದ ಸಾಗುತ್ತಿದೆ. ಪ್ರಾಥಮಿಕ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆಯನ್ನ ನೀಡಲಾಗ್ತಿದೆ. ಇನ್ನೂ ಈ ಕೊರೊನಾ ವ್ಯಾಕ್ಸಿನೇಷನ್ ಡ್ರೈವ್ನಲ್ಲಿ ಕೇರಳ ಹಾಗೂ ತಮಿಳುನಾಡು ಶೇಕಡಾ 25ರಷ್ಟು ಕಡಿಮೆ ಅಂಕಿ ಅಂಶವನ್ನ ದಾಖಲಿಸುವ ಕಳಪೆ ಪ್ರದರ್ಶನ ತೋರಿವೆ ಎಂದು ವರದಿಯಾಗಿದೆ.
ಕೊರೊನಾ ವ್ಯಾಕ್ಸಿನೇಷನ್ ಡ್ರೈವ್ ಸಂಬಂಧ ಪ್ರತಿನಿತ್ಯ ನಡೆಯುವ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಕೇರಳ ಹಾಗೂ ತಮಿಳುನಾಡಿನಲ್ಲಿ ಕೊರೊನಾ ಲಸಿಕೆ ಬಗ್ಗೆ ಅಲ್ಲಿನ ಆರೋಗ್ಯ ಸಿಬ್ಬಂದಿ ಹಿಂಜರಿಕೆ ಹೊಂದಿದ್ದಾರೆ ಎಂದು ಅಧಿಕಾರಿಗಳು ವ್ಯಾಕ್ಸಿನೇಷನ್ ಡ್ರೈವ್ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಇನ್ನು ತಮಿಳುನಾಡು ಹಾಗೂ ಕೇರಳದ ಜೊತೆಯಲ್ಲಿ ಪಂಜಾಬ್ ಹಾಗೂ ಚತ್ತೀಸಗಢ ಕೂಡ ಲಸಿಕೆ ವಿತರಣೆಯಲ್ಲಿ ಕಳಪೆ ಪ್ರದರ್ಶನ ತೋರಿದೆ ಎಂದು ಸಭೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ 70 ಪ್ರತಿಶತ ಲಸಿಕೆ ಕವರೇಜ್ ಮಾಡುವ ಮೂಲಕ ಉತ್ತಮ ಪ್ರದರ್ಶನ ತೋರಿವೆ.