ಝಾನ್ಸಿಯ ಮೌರಾನಿಪುರ ತಹಸಿಲ್ ನಲ್ಲಿ ವಿಚಿತ್ರ ಘಟನೆ ನಡೆದಿದೆ. ಯುವಕನೊಬ್ಬನನ್ನು ಕೆಲವರು ಆಸ್ಪತ್ರೆಗೆ ಕರೆ ತಂದಿದ್ದಾರೆ. ಆದ್ರೆ ಚಿಕಿತ್ಸೆಗೂ ಮುನ್ನ ಯುವಕ ಸಾವನ್ನಪ್ಪಿದ್ದಾನೆ. ಇದನ್ನು ನೋಡಿದ ಜನರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಯುವಕನನ್ನು ಆಸ್ಪತ್ರೆಗೆ ಕರೆ ತಂದಿದ್ದಾರೆ. ಆಸ್ಪತ್ರೆ ಬೆಂಚಿನ ಮೇಲೆ ಯುವಕನನ್ನು ಮಲಗಿಸಿದ್ದಾರೆ. ವೈದ್ಯರು ಪರೀಕ್ಷೆಗೆ ಬಂದ ವೇಳೆ ಯುವಕ ಬೆಂಚ್ ನಿಂದ ಕೆಳಗೆ ಬಿದ್ದಿದ್ದಾನೆ. ಹೃದಯಾಘಾತದಿಂದ ಅಲ್ಲಿಯೇ ಸಾವನ್ನಪ್ಪಿದ್ದಾನೆ.
ಯುವಕನನ್ನು ಕರೆತಂದವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಹೆಣವನ್ನು ಕೆಲ ಸಮಯ ಆಸ್ಪತ್ರೆ ಹೊರಗೆ ಇಡಲಾಗಿತ್ತಂತೆ. ಆದ್ರೆ ಯಾರೂ ಬರದ ಕಾರಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ.