alex Certify ಕಣ್ಣರಳಿಸಿ ನೋಡುವಂತಿದೆ ಹಿಮ ಚಿರತೆಯ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣರಳಿಸಿ ನೋಡುವಂತಿದೆ ಹಿಮ ಚಿರತೆಯ ಈ ವಿಡಿಯೋ

ಹಿಮ ಚಿರತೆಯ ಒಂದು ಗುಣವೆಂದರೆ, ಸುತ್ತಮುತ್ತಲಿನ ವಾತಾವರಣದ ಬಣ್ಣಕ್ಕೆ ತನ್ನನ್ನು ತಾನು‌ ಹೊಂದಿಕೊಳ್ಳುವುದು. ಈ ಗುಣದಿಂದ ಹಿಮ ಚಿರತೆ ಎಲ್ಲಿದೆ ಎಂದು ಹುಡುಕುವುದೇ ಕಷ್ಟ. ಇದು ಯಾವ ರೀತಿ ಇರುತ್ತದೆ ಎನ್ನುವ ವಿಡಿಯೋ ಇಲ್ಲಿದೆ ನೋಡಿ.

ಟ್ವೀಟರ್‌ನಲ್ಲಿ ಐಎಫ್‌‌ಎಸ್‌ ಅಧಿಕಾರಿ ಪರ್ವೀನ್‌ ಕಸ್ವಾನ್‌ ಉತ್ತರಾಖಾಂಡ್‌ನ ಗಂಗೋತ್ರಿ ರಾಷ್ಟ್ರೀಯ ಉದ್ಯಾನವನದಲ್ಲಿ ಈ ರೀತಿ ಮರೆಮಾಚಿಕೊಂಡು ಹೋಗುತ್ತಿರುವ ಹಿಮ ಚಿರತೆಯ ವಿಡಿಯೊವೊಂದನ್ನು ಹಾಕಿದ್ದಾರೆ. ಬೆಟ್ಟದ ಮೇಲೆ ನಡೆದುಕೊಂಡು ಹೋಗುತ್ತಿರುವ ಹಿಮಚಿರತೆ, ಸುತ್ತಲಿನ ಬಣ್ಣಕ್ಕೆ ಹೊಂದಿಕೊಂಡಿದೆ. ಆದ್ದರಿಂದ ಈ ಹಿಮ ಚಿರತೆ ಎಲ್ಲಿ ಹೋಗುತ್ತಿದೆ ಎನ್ನುವುದನ್ನು ತಿಳಿಯುವುದೇ ಕಷ್ಟವಾಗುತ್ತದೆ ಎನ್ನುವ ಮಾತನ್ನು ಹೇಳಿದ್ದಾರೆ.

ಈ ವಿಡಿಯೊ ಹಾಕುತ್ತಿದ್ದಂತೆ ನೆಟ್ಟಿಗರು ಬೆರಗು ಕಣ್ಣಿನಿಂದ ನೋಡಿದ್ದಾರೆ, ಕೆಲವರು ವಿಡಿಯೊದಲ್ಲಿ ಹಿಮಚಿರತೆ ಎಲ್ಲಿದೆ ಎನ್ನುವುದು ತಿಳಿಯದೇ, ಸಹಾಯಕ್ಕಾಗಿ ಕಾಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರು ಸೃಷ್ಟಿಯ ಈ ವಿಸ್ಮಯವನ್ನು ಕೊಂಡಾಡಿದ್ದಾರೆ. 33 ಸೆಕೆಂಡ್‌ನ ಈ ವಿಡಿಯೊವನ್ನು ಈಗಾಗಲೇ 20ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 1500ಕ್ಕೂ ಹೆಚ್ಚು ಮಂದಿ ಲೈಕ್‌ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...