alex Certify ವ್ಯಾಲೆಂಟೈನ್ಸ್​ ಡೇಗೆ ಪತ್ನಿಗೆ ಅಮೂಲ್ಯ ಉಡುಗೊರೆ ನೀಡಿದ ಪತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಾಲೆಂಟೈನ್ಸ್​ ಡೇಗೆ ಪತ್ನಿಗೆ ಅಮೂಲ್ಯ ಉಡುಗೊರೆ ನೀಡಿದ ಪತಿ…!

ಫೆಬ್ರವರಿ 14ನೆ ತಾರೀಖನ್ನ ಪ್ರೇಮಿಗಳ ದಿನವಾಗಿ ಆಚರಿಸಲಾಗುತ್ತೆ ಅನ್ನೋ ವಿಚಾರ ಎಲ್ಲರಿಗೂ ತಿಳಿದಿದೆ. ತಮ್ಮ ಪ್ರೀತಿ ಪಾತ್ರರಿಗೆ ಈ ದಿನದಂದು  ಗಿಫ್ಟ್​, ಚಾಕಲೇಟ್​, ಸೇರಿದಂತೆ ವಿವಿಧ ಉಡುಗೊರೆಗಳನ್ನ ನೀಡ್ತಾರೆ.

ವಿನೋದ್​ಭಾಯ್​​​ ಪಟೇಲ್​ ಎಂಬ ವ್ಯಕ್ತಿ ಮಾತ್ರ ತನ್ನ ಪತ್ನಿ ರಿತಾಬೆನ್​ ಪಟೇಲ್​ಗೆ ಅತ್ಯಂತ ಅಮೂಲ್ಯವಾದ ಉಡುಗೊರೆಯನ್ನ ನೀಡುವ ಮೂಲಕ ಜಗಕ್ಕೇ ಮಾದರಿಯಾಗಿದ್ದಾರೆ. ಪತ್ನಿಗೆ ಸ್ವಂತ ಕಿಡ್ನಿಯನ್ನೇ ನೀಡುವ ಮೂಲಕ ಆಕೆಯ ಆಯಸ್ಸನ್ನ ಹೆಚ್ಚಿಸಲು ಪ್ರಯತ್ನ ಪಟ್ಟಿದ್ದಾರೆ.

ಭಾರ ಎತ್ತುವ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ ಕಾಶ್ಮೀರದ ಮಹಿಳೆ….!

ಕಳೆದ ಮೂರು ವರ್ಷಗಳಿಂದ ರೀತಾಬೆನ್​ ಪಟೇಲ್​​ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈಕೆಗೆ ಈಗಾಗಲೇ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ನೀಡಲಾಗ್ತಿದೆ. ಅಲ್ಲದೇ ರೀತಾ ಬೆಹೆನ್​ ವಾರಕ್ಕೆ ಮೂರು ಬಾರಿ ಡಯಾಲಿಸಿಸ್​ ಚಿಕಿತ್ಸೆಗೆ ಒಳಗಾಗುತ್ತಿದ್ದರು. ಪತ್ನಿಯ ಈ ಕಷ್ಟವನ್ನ ನೋಡಲಾಗದ ಪತಿ ವಿನೋದ್​​ ಈ ನಿರ್ಧಾರವನ್ನ ಕೈಗೊಂಡಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ವಿನೋದ್​, ನನ್ನ ಪತ್ನಿ ನನ್ನ ಜೀವನದ ಎಲ್ಲಾ ಏರಿಳಿತಗಳಲ್ಲೂ ನನ್ನ ಜೊತೆ ಇದ್ದಳು. ಹೀಗಿರುವಾಗ ಆಕೆಯ ಹೋರಾಟವನ್ನ ಒಬ್ಬಳೇ ಎದುರಿಸಲು ನಾನು ಹೇಗೆ ತಾನೆ ಬಿಡಲು ಸಾಧ್ಯ..? ಹೀಗಾಗಿ ನಾನು ನನ್ನ ಕಿಡ್ನಿಯನ್ನೇ ಪತ್ನಿಗೆ ಕೊಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...