ಕರ್ಮ ಯಾವಾಗ ಬೇಕಾದರೂ ಹಿಂದಿರುಗಬಹುದು ಎನ್ನುವುದಕ್ಕೆ ಹಲವು ಸಾಕ್ಷಿಗಳಿವೆ. ಇದೀಗ ಮತ್ತೊಮ್ಮೆ ಈ ವಿಡಿಯೊದಿಂದ ಅದು ಸಾಬೀತಾಗಿದೆ.
ಹೌದು, ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಇದರಲ್ಲಿ ಗೋಶಾಲೆಯಲ್ಲಿ ವ್ಯಕ್ತಿಯೊಬ್ಬ ಹಸುವಿನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಆದರೆ ಇದನ್ನು ಕಂಡ ಹಸುವಿನ ಮರಿ ಬಂದು ತಾಯಿಯನ್ನು ರಕ್ಷಿಸಲು ಮುಂದಾಗಿದೆ. ಇದಾಗುತ್ತಿದ್ದಂತೆ, ವ್ಯಕ್ತಿಗೆ ಝಾಡಿಸಿ ಹೊಡೆದಿದೆ. ಇದೀಗ ಈ ವಿಡಿಯೊ ವೈರಲ್ ಆಗಿದೆ.
ಈ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿದ್ದು 2 ಸಾವಿರಕ್ಕೂ ಹೆಚ್ಚು ಲೈಕ್ಸ್, ಸಾವಿರಾರು ಕಾಮೆಂಟ್ ಬಂದಿದೆ. ಕೆಲವರು ಕರ್ಮ ಇಸ್ ಬ್ಯಾಕ್ ಎಂದರೆ, ಇನ್ನು ಕೆಲವರು ಇಂತವರಿಗೆ ಇದೇ ರೀತಿಯ ಶಿಕ್ಷೆಯಾಗಬೇಕು ಎಂದಿದ್ದಾರೆ.
https://twitter.com/MdSarwarpasha1/status/1301107310245212160?ref_src=twsrc%5Etfw%7Ctwcamp%5Etweetembed%7Ctwterm%5E1301107310245212160%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fcalf-savagely-kicks-man-who-was-beating-cows-with-a-stick-netizens-say-instant-karma-watch%2F646950