ಈಗಂತೂ ಬಹುತೇಕ ಮಂದಿ ಹೊರಗಡೆ ಸುತ್ತಾಡೋದು ಅಂದರೆ ಕ್ಯಾಬ್ ಬಳಕೆ ಮಾಡೋದೇ ಜಾಸ್ತಿ. ಇದಕ್ಕೆಂದೇ ಓಲಾ, ಊಬರ್ನಂತಹ ಕ್ಯಾಬ್ಗಳು ಇವೆ. ಇಂತಹ ಕ್ಯಾಬ್ಗಳು ಅನೇಕ ಬಾರಿ ಜನರಿಗೆ ಒಳ್ಳೆಯ ಸರ್ವೀಸ್ ನೀಡಿದ್ರೆ ಇನ್ನು ಕೆಲವು ಬಾರಿ ಕೆಟ್ಟ ಅನುಭವ ಮಾಡಿರೋದು ಇದೆ.
ಇದೀಗ ಇಂತಹದ್ದೇ ಒಂದು ವಿಚಾರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕ್ಯಾಬ್ ಡ್ರೈವರ್ ಒಬ್ಬರು ಟ್ರೆಂಡಿಂಗ್ನಲ್ಲಿ ಇದ್ದಾರೆ. ಈ ಕ್ಯಾಬ್ ಡ್ರೈವರ್ ಮಾಡಿದ ಕೆಲಸ ನೋಡಿದ ನೆಟ್ಟಿಗರು ಮೆಚ್ಚುಗೆಯ ಸುರಿಮಳೆ ಸುರಿಸುತ್ತಿದ್ದಾರೆ.
ಶರವಣ ಕುಮಾರ್ ಹೆಸರಿನ ಕ್ಯಾಬ್ ಡ್ರೈವರ್ ಊಬರ್ ಸರ್ವೀಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋಲ್ಕತ್ತಾ ಏರ್ಪೋರ್ಟ್ನಿಂದ ಅವರು ಪ್ರಯಾಣಿಕರನ್ನ ಪಿಕ್ ಮಾಡಿಕೊಂಡು ಹೊರಟಿದ್ದರು. ಈ ಪ್ರಯಾಣಿಕರು ಕ್ಯಾಬ್ನಲ್ಲೇ ಕೆಲ ಅಮೂಲ್ಯ ವಸ್ತುಗಳನ್ನ ಬಿಟ್ಟು ತೆರಳಿದ್ದರು.
ಪ್ರಾಮಾಣಿಕತೆ ಮೆರೆದ ಶರವಣ್ ಕುಮಾರ್ ಈ ಎಲ್ಲಾ ಬೆಲೆಬಾಳುವ ಸಾಮಗ್ರಿಗಳನ್ನ ಪ್ರಯಾಣಿಕನಿಗೆ ಹಿಂದಿರುಗಿಸಿದ್ದಾರೆ. ಪತ್ರಕರ್ತ ಅಭಿಜಿತ್ ಮಜೂಂದಾರ್ ಟ್ವಿಟರ್ನಲ್ಲಿ ಶರವಣ್ ಕುಮಾರ್ರ ಈ ಕಾರ್ಯದ ಬಗ್ಗೆ ವಿಶ್ಲೇಷಣೆ ಮಾಡುತ್ತಾ, ನಾನು ಕ್ಯಾಬ್ನಲ್ಲಿ ನನ್ನ ಬ್ಯಾಗ್ನ್ನು ಮರೆತಿದ್ದೆ. ಇದರಲ್ಲಿ ನನ್ನ ಮ್ಯಾಕ್ಬುಕ್, ಹಣ, ಕೀಲಿ ಕೈ ಹಾಗೂ ಕೆಲ ಪುಸ್ತಕಗಳು ಇದ್ದವು. ಮಧ್ಯರಾತ್ರಿ ವೇಳೆಗೆ ಈ ಚಾಲಕ ನನ್ನ ಮನೆಗೆ ಬಂದರು ಹಾಗೂ ಎಲ್ಲಾ ಸಾಮಗ್ರಿಗಳನ್ನ ಸುರಕ್ಷಿತವಾಗಿ ತಲುಪಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಟ್ವಿಟರ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.