ಸಿಂಹ ಎಂದರೆ ಕಾಡಿನ ರಾಜ. ಅದರಷ್ಟು ಶಕ್ತಿಶಾಲಿ ಬೇರೆ ಯಾವ ಪ್ರಾಣಿಯೂ ಇಲ್ಲ. ಎಂದು ಚಿಕ್ಕಂದಿನಿಂದ ಓದಿದ್ದೇವೆ. ಆದರೆ, ಸಿಂಹವೇ ಹೆದರಿ ಓಡುವ ವಿಡಿಯೋವೊಂದು ಇಲ್ಲಿದೆ. ಅದಕ್ಕೆ ಕಾರಣವಾಗಿದ್ದು ಒಗ್ಗಟ್ಟು.
ಎಮ್ಮೆಗಳ ಗುಂಪೊಂದು ತಮ್ಮ ವ್ಯಾಪ್ತಿಗೆ ಬಂದ ಸಿಂಹವೊಂದನ್ನು ಹೆದರಿಸಿ ಓಡಿಸಿದ ವಿಡಿಯೋವೊಂದನ್ನು ಐಎಫ್ಎಸ್ ಅಧಿಕಾರಿ ಸುಶಾಂತ ನಂದಾ ಟ್ವೀಟ್ ಮಾಡಿದ್ದಾರೆ. ವಿಡಿಯೋವನ್ನು 5 ಸಾವಿರ ಜನ ವೀಕ್ಷಿಸಿದ್ದು, ಹಲವರು ರೀ ಟ್ವೀಟ್ ಮಾಡಿದ್ದಾರೆ. ಸಾಕಷ್ಟು ಲೈಕ್ ಹಾಗೂ ಕಮೆಂಟ್ ಗಳೂ ಬಂದಿವೆ.
ಸಫಾರಿ ಕಾರಿನ ಮೂಲಕ ವಿಡಿಯೋ ಶೂಟ್ ಮಾಡಲಾಗಿದ್ದು, “ಮರುಭೂಮಿ ಪ್ರದೇಶದಲ್ಲಿ ನೀರಿಗಾಗಿ ಯುದ್ಧ ನಡೆದಿದೆ. ಎಮ್ಮೆಗಳ ಗುಂಪು ಒಟ್ಟಾಗಿ ಸಿಂಹವನ್ನು ಓಡಿಸಿದೆ” ಎಂದು ನಂದಾ ಕ್ಯಾಪ್ಶನ್ ನೀಡಿದ್ದಾರೆ. ಒಗ್ಗಟ್ಟಿನ ಕುರಿತು ಹಲವು ಕಮೆಂಟ್ ಗಳು ಬಂದಿವೆ.