ಕೇಂದ್ರ ಬಜೆಟ್ 2021ರ ಪ್ರಮುಖ ಪ್ರಕಟಣೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ದೇಶದಲ್ಲಿ 15 ಸಾವಿರ ಶಾಲೆಗಳನ್ನ ಬಲಪಡಿಸಲಾಗುವುದು ಹಾಗೂ ಎನ್ಜಿಓಗಳ ಸಹಭಾಗಿತ್ವದಲ್ಲಿ 100 ಹೊಸ ಸೈನಿಕ್ ಶಾಲೆಗಳನ್ನ ಸ್ಥಾಪನೆ ಮಾಡೋದಾಗಿ ಘೋಷಣೆ ಮಾಡಿದ್ದಾರೆ .
ಕೇಂದ್ರಾಡಳಿತ ಪ್ರದೇಶಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಲಡಾಖ್ನ ಲೇಹ್ನಲ್ಲಿ ಕೇಂದ್ರ ವಿಶ್ವ ವಿದ್ಯಾಲಯ ಸ್ಥಾಪನೆಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇಷ್ಟು ಮಾತ್ರವಲ್ಲದೇ ಬುಡಕಟ್ಟು ಹಾಗೂ ದಲಿತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುಗಾಗಿ ಏಕಲವ್ಯ ಶಾಲೆಗಳಿಗೆ 38 ಕೋಟಿ ರೂಪಾಯಿಗಳನ್ನ ಮೀಸಲಿಡಲಾಗಿದೆ ಅಂತಂದ್ರು.
ಹಾಗೂ ನಿರ್ಮಲಾ ಸೀತಾರಾಮನ್ ತಮ್ಮ ಭಾಷಣದ ವೇಳೆ ಯುವಕರಿಗೆ ಅವಕಾಶಗಳನ್ನ ಹೆಚ್ಚಿಸುವ ಸಲುವಾಗಿ ಅಪ್ರೆಂಟಿಸ್ಶಿಪ್ ಕಾನೂನು ತಿದ್ದುಪಡಿ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ .