alex Certify 10 ನೇ ತರಗತಿ ಸೇರಿ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ BSF ನಲ್ಲಿ ನೇಮಕಾತಿಗೆ ಅರ್ಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ನೇ ತರಗತಿ ಸೇರಿ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ BSF ನಲ್ಲಿ ನೇಮಕಾತಿಗೆ ಅರ್ಜಿ

ಗಡಿ ಭದ್ರತಾ ಪಡೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. 228 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 28 ಕೊನೆಯ ದಿನವಾಗಿದೆ.

ಸಬ್ ಇನ್ಸ್ ಪೆಕ್ಟರ್ 64 ಹುದ್ದೆಗಳು, ಕಾನ್ಸ್ ಟೇಬಲ್ 75, ಜೂನಿಯರ್ ಇಂಜಿನಿಯರ್/ಎಸ್ಐ 52, ಟಕ್ನಿಷಿಯನ್ 15, ಅಸಿಸ್ಟೆಂಟ್ ಏರ್ ಕ್ರಾಫ್ಟ್ ಮೆಕಾನಿಕ್ 22 ಹುದ್ದೆಗಳು ಇವೆ.

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕವಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಾಜಿ ಸೈನಿಕರು, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಕನಿಷ್ಠ 18 ವರ್ಷ ವಯೋಮಿತಿ ಹೊಂದಿದವರು ಅರ್ಜಿಸಲ್ಲಿಸಬಹುದಾಗಿದ್ದು, ವಿವಿಧ ವರ್ಗಗಳಿಗೆ ವಯೋಮಿತಿಯಲ್ಲಿ ವಿನಾಯಿತಿ ಇರುತ್ತದೆ.

ಮಾನ್ಯತೆ ಪಡೆದ ಸಂಸ್ಥೆ, ವಿಶ್ವವಿದ್ಯಾಲಯದಿಂದ ಐಟಿಐ, ಡಿಪ್ಲೊಮಾ, 10 ನೇ ತರಗತಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದಾಗಿದೆ. ಮಾಹಿತಿಗೆ https://bsf.gov.in/Home ಗಮನಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...