
ವಿಶ್ವದೆಲ್ಲೆಡೆ ಭಯದ ವಾತಾವರಣ ಸೃಷ್ಟಿಸಿರೋ ಕೊರೊನಾಗೆ ಇನ್ನೂ ಲಸಿಕೆ ಸಿಕ್ಕಿಲ್ಲ. ಹೀಗಾಗಿ ಜನರಿಗೆ ಸದ್ಯ ಮಾಸ್ಕ್, ಸಾಮಾಜಿಕ ಅಂತರ ಹಾಗೂ ಪದೇ ಪದೇ ಕೈ ತೊಳೆಯೋದು ಅನಿವಾರ್ಯವಾಗಿದೆ. ಆದರೆ ಇವಿಷ್ಟೇ ಕೊರೊನಾ ವಿರುದ್ಧದ ಹೋರಾಟಕ್ಕೆ ಸಾಕಾಗೊಲ್ಲ ಅಂತಾ ಬ್ರಿಟಿಷ್ ದಂತ ವೈದ್ಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ದಂತ ವೈದ್ಯ ಮಾರ್ಟಿನ್ ಆಡಿ ಎಂಬವರು ಕೊರೊನಾ ನಿಯಂತ್ರಣ ಮಾಡಬೇಕು ಅಂದ್ರೆ ಹ್ಯಾಂಡ್ವಾಶ್ ನಷ್ಟೇ ಹಲ್ಲುಜ್ಜೋಕೂ ಕೂಡ ಪ್ರಾಮುಖ್ಯತೆ ನೀಡಬೇಕು ಅಂತಾ ಹೇಳಿದ್ದಾರೆ. ಸೋಪು ಹಾಗೂ ಸ್ಯಾನಿಟೈಸರ್ನಲ್ಲಿರುವ ಕೆಲ ಅಂಶಗಳು ಟೂತ್ಪೇಸ್ಟ್ನಲ್ಲೂ ಇರುತ್ತೆ, ಹೀಗಾಗಿ ಇದು ನಿಮ್ಮ ಬಾಯಿ ಮೂಲಕ ಕರೊನಾ ವೈರಸ್ ಎಂಟ್ರಿ ಆಗೋದನ್ನ ತಪ್ಪಿಸುತ್ತೆ ಅಂತಾ ಹೇಳಿದ್ದಾರೆ.
ಟೂತ್ಪೇಸ್ಟ್ನಿಂದ ಬ್ರಶ್ ಮಾಡಿದ 5 ಗಂಟೆಗಳವರೆಗೆ ಅದರ ಎಫೆಕ್ಟ್ ಬಾಯಿಯಲ್ಲಿ ಇರುತ್ತೆ. ಈ ಸಮಯದಲ್ಲಿ ಎಂಜಲಿನಲ್ಲಿ ಇರುವ ಎಲ್ಲ ವೈರಸ್ಗಳನ್ನ ಟೂತ್ಪೇಸ್ಟ್ ನಾಶ ಮಾಡುವ ಶಕ್ತಿ ಹೊಂದಿದೆ. ಹೀಗಾಗಿ ಪ್ರತಿ 5 ತಾಸಿಗೊಮ್ಮೆ ಬ್ರಶ್ ಮಾಡ್ತಾ ಇರಿ ಅಂತಾ ದಂತ ವೈದ್ಯ ಸಲಹೆ ನೀಡಿದ್ದಾರೆ.