alex Certify BREAKING NEWS: ತ್ರಿವರ್ಣ ಧ್ವಜಕ್ಕೆ ಅಪಮಾನ – ಇಡೀ ದೇಶದ ಜನರು ತಲೆ ತಗ್ಗಿಸುವ ಕೃತ್ಯ – ದೆಹಲಿ ಹಿಂಸಾಚಾರಕ್ಕೆ ಪ್ರಧಾನಿ ಮೋದಿ ಗರಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ತ್ರಿವರ್ಣ ಧ್ವಜಕ್ಕೆ ಅಪಮಾನ – ಇಡೀ ದೇಶದ ಜನರು ತಲೆ ತಗ್ಗಿಸುವ ಕೃತ್ಯ – ದೆಹಲಿ ಹಿಂಸಾಚಾರಕ್ಕೆ ಪ್ರಧಾನಿ ಮೋದಿ ಗರಂ

ನವದೆಹಲಿ: 2021ರ ಮೊದಲ ಮನ್ ಕೀ ಬಾತ್ ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತದ ಯಶಸ್ಸು, ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಗೆಲುವು, ಹೊಸ ವರ್ಷಾಚರಣೆ, ಸಂಕ್ರಾಂತಿ ಸಂಭ್ರಮ, ಗಣರಾಜ್ಯೋತ್ಸವ ಆಚರಣೆ ಹಾಗೂ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜಕ್ಕೆ ಅಪಮಾನದ ಸಂಗತಿ ಹೀಗೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.

ಸಮಯ ಅದೆಷ್ಟು ವೇಗವಾಗಿ ಕಳೆಯುತ್ತದೆ. ಮೊನ್ನೆಯಷ್ಟೇ ಹೊಸ ವರ್ಷಕ್ಕೆ ಕಾಲಿಟ್ಟಿದ್ದೆವು. ಇದೀಗ ಹೊಸ ವರ್ಷದ ಒಂದು ತಿಂಗಳು ಕಳೆದೇ ಹೋಯಿತು. ಜನವರಿಯಲ್ಲಿ ಏನೆಲ್ಲಾ ಘಟನೆಗಳು ನಡೆದವು. ಹೆಮ್ಮೆ, ಬೇಸರ ಎರಡನ್ನೂ ಜನವರಿ ತಿಂಗಳು ತಂದಿತು. ಹಬ್ಬಗಳ ಖುಷಿ, ಕ್ರಿಕೆಟ್ ಆಟದಲ್ಲಿ ಗೆಲುವು ಎಲ್ಲ ಸಂತಸದ ವಿಚಾರ. ಆದರೆ ಗಣರಾಜ್ಯೋತ್ಸವ ದಿನದಂದು ಕೆಂಪುಕೋಟೆಯ ಮೇಲೆ ನಡೆದ ಘಟನೆ ತುಂಬಾ ಬೇಸರ ತಂದ ಘಟನೆ ಎಂದು ಹೇಳಿದರು.

ಮಿತ್ರ ಪಕ್ಷದಿಂದ ರೈತರ ಹೋರಾಟಕ್ಕೆ ಬೆಂಬಲ: ಇಕ್ಕಟ್ಟಿಗೆ ಸಿಲುಕಿದ ಹರಿಯಾಣದ ಬಿಜೆಪಿ ಸರ್ಕಾರ

ಜನವರಿ 26ರ ಗಲಭೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಿದ್ದು ದು:ಖಕರ. ಕೆಂಪುಕೋಟೆ ಮೇಲೆ ಹತ್ತಿ ಧ್ವಜಾರೋಹಣ ಮಾಡಿ, ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಿರುವುದು ಇಡೀ ದೇಶದ ಜನರು ತಲೆ ತಗ್ಗಿಸುವಂತಹ ವಿಷಯ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...