alex Certify ‘ಗರ್ಲ್ಸ್ ಲಾಕರ್ ರೂಮ್’ನಲ್ಲಿ ಹುಡುಗರ ದೇಹ, ಸೆಕ್ಸ್ ಬಗ್ಗೆ ಚರ್ಚೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗರ್ಲ್ಸ್ ಲಾಕರ್ ರೂಮ್’ನಲ್ಲಿ ಹುಡುಗರ ದೇಹ, ಸೆಕ್ಸ್ ಬಗ್ಗೆ ಚರ್ಚೆ

ನವದೆಹಲಿ: ಇನ್ಸ್ಟಾಗ್ರಾಮ್ ಗ್ರೂಪ್ನಲ್ಲಿ ಬಾಲಕಿಯರ ಕುರಿತಾಗಿ ಅಶ್ಲೀಲ ಚಾಟ್ ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದ ‘ಬಾಯ್ಸ್ ಲಾಕರ್ ರೂಮ್’ ಟ್ವಿಟರ್ನಲ್ಲಿ ಟ್ರೆಂಡ್ ಆಗಿತ್ತು.

ಇದಾದ ನಂತರದಲ್ಲಿ ‘ಗರ್ಲ್ಸ್ ಲಾಕರ್ ರೂಮ್’ ಟ್ರೆಂಡ್ ಆಗ್ತಿದೆ. ಹುಡುಗಿಯರು ಹುಡುಗರ ಬಗ್ಗೆ ಅಶ್ಲೀಲವಾಗಿ ಚರ್ಚಿಸಿರುವ ಸ್ಕ್ರೀನ್ ಶಾಟ್ ಸಮೇತ ಚರ್ಚೆ ನಡೆಸಲಾಗಿದೆ. ಹುಡುಗರ ದೇಹ, ಸೆಕ್ಸ್ ಬಗ್ಗೆ ಹುಡುಗಿಯರು ವಾಟ್ಸಾಪ್ ಇನ್ಸ್ಟಾಗ್ರಾಮ್ ಗ್ರೂಪ್ ಗಳಲ್ಲಿ ಚರ್ಚೆ ಮೂಲಕ ಟ್ರೆಂಡ್ ಆಗಿದೆ.

‘ಬಾಯ್ಸ್ ಲಾಕರ್ ರೂಮ್’ ಹೆಸರಿನ ಗ್ರೂಪ್ನಲ್ಲಿ 100 ಕ್ಕೂ ಅಧಿಕ ಬಾಲಕರು ಇದ್ದು ಕೆಲವರು ಬಾಲಕಿಯರಿಗೆ ಸಂಬಂಧಿಸಿದಂತೆ ಅಶ್ಲೀಲ ಫೋಟೋ ಹಂಚಿಕೊಂಡಿದ್ದಾರೆ. ಗ್ಯಾಂಗ್ ರೇಪ್ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ.

ಈ ಕುರಿತಾಗಿ ದೆಹಲಿ ಮಹಿಳಾ ಆಯೋಗ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿ ಅಪ್ರಾಪ್ತನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದೇ ವೇಳೆ ‘ಗರ್ಲ್ಸ್ ಲಾಕರ್ ರೂಮ್’ನಲ್ಲಿ ಹುಡುಗರ ಬಗ್ಗೆ ಚರ್ಚೆಯಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...