ವರದಕ್ಷಿಣೆ ಕಿರುಕುಳ ಆರೋಪದಡಿಯಲ್ಲಿ ಮಹಿಳಾ ಮಧ್ಯವರ್ತಿಯ ವಿರುದ್ಧ ದಾಖಲು ಮಾಡಲಾಗಿದ್ದ ಕೇಸ್ನ್ನು ಮುಂಬೈ ಹೈಕೋರ್ಟ್ ರದ್ದು ಪಡಿಸಿದೆ. ಅಪರಿಚಿತರನ್ನ ವರದಕ್ಷಿಣೆ ಕಿರುಕುಳ ಆರೋಪದ ಅಡಿಯಲ್ಲಿ ತರಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಎಫ್ಐಆರ್ ರದ್ದುಗೊಳಿಸಿದ ಮುಂಬೈ ಹೈಕೋರ್ಟ್ನ ಔರಂಗಾಬಾದ್ ಪೀಠ, ಅಪರಿಚಿತರು ಅಥವಾ ರಕ್ತ ಸಂಬಂಧಿಗಳಲ್ಲದವರನ್ನ ವರದಕ್ಷಿಣೆ ಕಿರುಕುಳ ಆರೋಪ ಅಂದ್ರೆ ಐಪಿಸಿ ಸೆಕ್ಷನ್ 498 ಎ ಅಡಿಯಲ್ಲಿ ತರಲು ಸಾಧ್ಯವಿಲ್ಲ ಎಂದು ಹೇಳಿದೆ
ಮಹಿಳೆಯೊಬ್ಬರು ತಮ್ಮ ಪತಿ, ಮಾವ, ಹಾಗೂ ಪತಿಯ ವಿವಾಹಿತ, ಅವಿವಾಹಿತ ಸಹೋದರಿಯರು, ಪತಿಯ ಸಂಬಂಧಿ ಹಾಗೂ ಈ ಮದುವೆಯನ್ನ ಮಾಡಿಸಿದ್ದ ಮದ್ಯವರ್ತಿಯ ವಿರುದ್ಧ ವರದಕ್ಷಿಣೆ ಕಿರುಕುಳ ದೂರನ್ನ ನೀಡಿದ್ದರು.
ಈ ಜೋಡಿ 2018ರಲ್ಲಿ ವಿವಾಹವಾಗಿತ್ತು. ಆಕೆ ಮದುವೆಯಾದ 2 ತಿಂಗಳುಗಳ ಬಳಿಕ, ಆಕೆಯ ಬಳಿ ಪತಿಯ ಕುಟುಂಬಸ್ಥರು ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರು ಹಾಗೂ ಕಿರುಕುಳ ನೀಡುತ್ತಿದ್ದರು, ಅಲ್ಲದೇ 7 ತಿಂಗಳುಗಳ ಬಳಿಕ ಅಂದರೆ 2019ರಲ್ಲಿ ನನ್ನನ್ನ ಮನೆಯಿಂದ ಆಚೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಳು.
ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಾಸ್ ಜಾಧವ್ ಹಾಗೂ ಮುಕುಂದ್ ಸೆವ್ಲಿಕರ್ ನೇತೃತ್ವದದ ಪೀಠ ಐಪಿಸಿ ಸೆಕ್ಷನ್ 498 ಎ ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದೆ. ಹೀಗಾಗಿ ಪತಿ ಹಾಗೂ ಆತನ ಸಹೋದರಿಯರು ಈ ಸೆಕ್ಷನ್ನಡಿಯಲ್ಲಿ ಯಾವುದೇ ವಿನಾಯಿತಿ ಇರೋದಿಲ್ಲ ಎಂದು ಹೇಳಿದೆ. ಆದರೆ ಈ ಸೆಕ್ಷನ್ನ ಅಡಿಯಲ್ಲಿ ಸಂಬಂಧಿಕರಲ್ಲದವರನ್ನ ಸೇರಿಸೋಕೆ ಸಾಧ್ಯವಿಲ್ಲ ಎಂದು ಹೇಳಿದೆ.