alex Certify ಬರೋಬ್ಬರಿ 1400 ಕಿ.ಮೀ ಕ್ರಮಿಸಿ ಸ್ನೇಹಿತನ ಪೋಷಕರಿಗೆ ಆಕ್ಸಿಜನ್​ ಸಿಲಿಂಡರ್​ ಒದಗಿಸಿದ ʼಹೃದಯವಂತʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 1400 ಕಿ.ಮೀ ಕ್ರಮಿಸಿ ಸ್ನೇಹಿತನ ಪೋಷಕರಿಗೆ ಆಕ್ಸಿಜನ್​ ಸಿಲಿಂಡರ್​ ಒದಗಿಸಿದ ʼಹೃದಯವಂತʼ

ದೇಶದಲ್ಲಿ ಕೊರೊನಾ ಎರಡನೇ ಅಲೆ ಮಿತಿಮೀರಿರುವ ಬೆನ್ನಲ್ಲೇ ವೈದ್ಯಕೀಯ ಸೌಲಭ್ಯಗಳಿಗೆ ಅಭಾವ ಉಂಟಾಗಿದೆ. ಐಸಿಯು ಬೆಡ್​ಗಳು, ವೈದ್ಯಕೀಯ ಆಮ್ಲಜನಕ, ರೆಮಿಡಿಸಿವರ್​ ಹೀಗೆ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿದೆ. ಸೋಶಿಯಲ್​ ಮೀಡಿಯಾ ಮೂಲಕ ಬಹುತೇಕ ಮಂದಿ ವೈದ್ಯಕೀಯ ಅವಶ್ಯಕತೆ ಇರುವವರೆಗೆ ಸಹಾಯವನ್ನೂ ಮಾಡುತ್ತಿದ್ದಾರೆ.

ಜಾರ್ಖಂಡ್​ನ ಬೊಕಾರೋ ಶಾಲೆಯ 38 ವರ್ಷದ ಶಿಕ್ಷಕರೊಬ್ಬರು ಸ್ನೇಹಿತರ ಕುಟುಂಬ ಕೋವಿಡ್​ ಸಂಕಷ್ಟದಲ್ಲಿದ್ದ ಹಿನ್ನೆಲೆ ನೊಯ್ಡಾಗೆ ತೆರಳಿ ವೈದ್ಯಕೀಯ ಆಮ್ಲಜನಕ ಪೂರೈಕೆ ಮಾಡಿದ್ದಾರೆ. ಆಕ್ಸಿಜನ್​ ಸಿಲಿಂಡರ್​ ಹಿಡಿದು 24 ಗಂಟೆಗಳ ಪ್ರಯಾಣದ ಮೂಲಕ 3 ರಾಜ್ಯಗಳನ್ನ ದಾಟಿ 1400 ಕಿಲೋಮೀಟರ್​ ಕ್ರಮಿಸಿ ಆಕ್ಸಿಜನ್​ ಸಿಲಿಂಡರ್​ ನೀಡಿದ್ದಾರೆ.

ಸೆಕ್ಟರ್​ 4ರ ನಿವಾಸಿಯಾಗಿರುವ ದೇವೇಂದ್ರ ಮಧ್ಯಾಹ್ನ1.30 ರ ಸುಮಾರಿಗೆ ತಮ್ಮ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ತಮ್ಮ ಸ್ನೇಹಿತ ರಂಜನ್​ ಅಗರ್​ಬಾಲ್​ ಪೋಷಕರು ಆಕ್ಸಿಜನ್​ ಅಭಾವ ಹೊಂದಿರೋದು ಗಮನಕ್ಕೆ ಬಂದ ಹಿನ್ನೆಲೆ ಊರೆಲ್ಲ ಸುತ್ತಾಡಿ ಕೊನೆಗೂ 10000 ರೂಪಾಯಿ ಪಾವತಿಸಿ ಆಕ್ಸಿಜನ್ ಸಿಲಿಂಡರ್​ ಪಡೆಯುವಲ್ಲಿ ಯಶಸ್ವಿಯಾದ್ರು. ಉತ್ತರ ಪ್ರದೇಶ ಹಾಗೂ ಬಿಹಾರ ಪೊಲೀಸರಿಗೆ ಪರಿಸ್ಥಿತಿಯ ಮನವರಿಕೆ ಮಾಡಿಸಿ ಕೊನೆಗೂ ಆಕ್ಸಿಜನ್​ನ್ನು ಸ್ನೇಹಿತನ ಪೋಷಕರಿಗೆ ಒದಗಿಸಿ ಚಿಕಿತ್ಸೆಗೆ ನೆರವಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...