ಮಾರ್ಷಲ್ ಆರ್ಟ್ ಮಾಸ್ಟರ್ ಪಿ. ಪ್ರಭಾಕರ್ ಮತ್ತವರ ವಿದ್ಯಾರ್ಥಿ ಬೊಯಿಲ್ಲಾ ರಾಕೇಶ್ ಕಣ್ಣು ಮುಚ್ಚಿಕೊಂಡೇ 49 ತೆಂಗಿನಕಾಯಿಗಳನ್ನ 1 ನಿಮಿಷದಲ್ಲಿ ಒಡೆಯೋ ಮೂಲಕ ಗಿನ್ನೆಸ್ ದಾಖಲೆ ಬರೆದಿದ್ದಾರೆ.
ಆಂಧ್ರ ಪ್ರದೇಶದ ನೆಲ್ಲೋರ್ನ ಪಿ. ಫ್ರಭಾಕರ್ & ಟೀಂ ಈ ದಾಖಲೆ ಬರೆದಿದೆ. ವಿದ್ಯಾರ್ಥಿ ರಾಕೇಶ್ರನ್ನ ನೆಲದ ಮೇಲೆ ಮಲಗಿಸಿ ಅವರ ಸುತ್ತ ತೆಂಗಿನಕಾಯಿಗಳನ್ನ ಇಡಲಾಗಿತ್ತು. ಬಳಿಕ ಕಣ್ಣನ್ನ ಬಟ್ಟೆಯಲ್ಲಿ ಕಟ್ಟಿಕೊಂಡ ಪ್ರಭಾಕರ್ ಒಂದೇ ನಿಮಿಷದಲ್ಲಿ ಸುತ್ತಿಗೆಯಿಂದ 49 ತೆಂಗಿನಕಾಯಿಗಳನ್ನ ಒಡೆದಿದ್ದಾರೆ.
ಸೆಪ್ಟೆಂಬರ್ 15ರಂದು ನೆಲ್ಲೋರ್ನಲ್ಲಿ ಪ್ರಭಾಕರ್ & ಟೀಂ ಈ ಸಾಧನೆ ಮಾಡಿದೆ. ಪ್ರಭಾಕರ್ 1 ನಿಮಿಷದಲ್ಲಿ 35 ತೆಂಗಿನಕಾಯಿಗಳನ್ನ ಒಡೆಯೋಕೆ ಪ್ಲಾನ್ ಮಾಡಿದ್ದರು. ಆದರೆ 49 ತೆಂಗಿನ ಕಾಯಿಗಳನ್ನ ಒಡೆದು ಸಾಧನೆ ಮಾಡಿದ್ರು. ಇನ್ನು ಈ ವಿಚಾರವಾಗಿ ಮಾತನಾಡಿದ ಪ್ರಭಾಕರ್, ನಾವು ಕಳೆದ 6 ತಿಂಗಳಿನಿಂದ ತರಬೇತಿ ಮಾಡುತ್ತಲೇ ಇದ್ದೆವು. 35 ತೆಂಗಿನಕಾಯಿಗಳನ್ನ ಒಡೆದು ಹಳೆಯ ರೆಕಾರ್ಡ್ನ್ನ ಮೀರಬೇಕು ಅನ್ನೋದು ನಮ್ಮ ಗುರಿಯಾಗಿತ್ತು. ಆದರೆ ಇದೀಗ 49 ತೆಂಗಿನ ಕಾಯಿಗಳನ್ನ ಒಡೆದಿರೋದು ಖುಷಿ ತಂದಿದೆ ಅಂತಾ ಹೇಳಿದ್ರು.
ಇದು ನನ್ನ ಮೊದಲ ಗಿನ್ನೆಸ್ ರೆಕಾರ್ಡ್. ನನ್ನ ಸಾಧನೆ ಕಂಡು ನನ್ನ ಪೋಷಕರು ತುಂಬಾನೇ ಖುಷಿಯಾಗಿದ್ದಾರೆ ಅಂತಾ ಸಂತಸ ವ್ಯಕ್ತಪಡಿಸ್ತಾರೆ ವಿದ್ಯಾರ್ಥಿ ರಾಕೇಶ್.