ಮ್ಯೂಕೋರಮೈಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್ ಮುಖ್ಯವಾಗಿ ಇತರ ಆರೋಗ್ಯ ಸಮಸ್ಯೆಗಳಿಗೆ ಔಷಧಿಗಳನ್ನು ತೆಗೆದುಕೊಳ್ಳುವ ಜನರ ಮೇಲೆ ಬೇಗ ಪರಿಣಾಮ ಬೀರುತ್ತದೆ. ಇದು ರೋಗ ನಿರೋಧಕ ಶಕ್ತಿ ಕಡಿಮೆ ಮಾಡುತ್ತದೆ. ಕಣ್ಣು ಮತ್ತು ಮೂಗಿನ ಸುತ್ತ ನೋವು ಮತ್ತು ಆ ಜಾಗ ಕೆಂಪಾಗುವುದು, ಜ್ವರ, ತಲೆನೋವು, ಕೆಮ್ಮು, ಉಸಿರಾಟದ ತೊಂದರೆ, ರಕ್ತ ವಾಂತಿ ಮತ್ತು ಮಾನಸಿಕ ಸ್ಥಿತಿಯಲ್ಲಿನ ಬದಲಾವಣೆಗಳು ಇದರ ಲಕ್ಷಣಗಳಾಗಿವೆ.
ಇದ್ರಿಂದ ರಕ್ಷಣೆ ಪಡೆಯುವುದು ಬಹಳ ಮುಖ್ಯ. ಕೆಲವೊಂದು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡಲ್ಲಿ ಬ್ಲಾಕ್ ಫಂಗಸ್ ನಿಂದ ದೂರವಿರಬಹುದು. ಧೂಳಿನ ಪ್ರದೇಶಕ್ಕೆ ಹೋಗುವ ಸಂದರ್ಭದಲ್ಲಿ ಮಾಸ್ಕ್ ಧರಿಸಿ. ಮಣ್ಣಿಗೆ ಹೋಗುವ ಮೊದಲು ಉದ್ದವಾದ ಪ್ಯಾಂಟ್, ಬೂಟ್, ಫುಲ್ ತೋಳಿನ ಶರ್ಟ್ ಧರಿಸಿ. ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ. ಎಲ್ಲ ಕಡೆ ಉಜ್ಜಿ, ಸರಿಯಾಗಿ ಸ್ನಾನ ಮಾಡಿ.
ಮೂಗು ಕಟ್ಟುವುದು, ಮೂಗಿನಿಂದ ರಕ್ತ ಸೋರುವುದು, ಕನ್ನೆ ಮೂಳೆಗಳ ನೋವು, ಮುಖದ ಒಂದು ಬದಿಯಲ್ಲಿ ನೋವು, ಮರಗಟ್ಟುವಿಕೆ, ದವಡೆ ನೋವು, ಚರ್ಮದ ಗಾಯ, ಜ್ವರ, ಕಣ್ಣು ಮಸುಕಾಗುವುದು, ಎದೆ ನೋವು ಕಾಣಿಸಿಕೊಳ್ಳುತ್ತದೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಬೇಕು. ಮಧುಮೇಹ ರೋಗಿಗಳು ಈ ಬಗ್ಗೆ ಹೆಚ್ಚು ಎಚ್ಚರವಾಗಿರಬೇಕು.ವೈದ್ಯರ ಸಲಹೆಯಂತೆ ಸ್ಟೀರಾಯ್ಡ್ ಬಳಸಬೇಕು. ಕೃತಕ ಆಕ್ಸಿಜನ್ ಬಳಕೆ ವೇಳೆ ಶುದ್ಧತೆ ಬಗ್ಗೆ ಗಮನ ನೀಡಿ. ಎಂಟಿಬಯೋಟಿಕ್ಸ್ ಹಾಗೂ ಎಂಟಿ ಫಂಗಲ್ಸ್ ಔಷಧಿಯನ್ನು ಸರಿಯಾಗಿ ಬಳಸಿ.
ಮೂಗು ಕಟ್ಟುವುದನ್ನು ನಿರ್ಲಕ್ಷಿಸಬೇಡಿ. ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಇದು ಕಡಿಮೆಯಾಗುತ್ತದೆ.