
ಕೃಷಿ ಮಸೂದೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ರಾಹುಲ್ ಗಾಂಧಿ, ರಾಷ್ಟ್ರದ ಬೆನ್ನೆಲುಬಾದ ರೈತರ ವಿರುದ್ಧ ಕೇಂದ್ರ ಸರ್ಕಾರ ಮೂರು ಮಸೂದೆಗಳನ್ನ ಅಂಗೀಕರಿಸಿದೆ. ಮೀನುಗಾರರ ಸಭೆಯಲ್ಲಿ ನಾನೇಕೆ ರೈತರ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ನಿಮಗೆ ಆಶ್ಚರ್ಯ ಎನಿಸಬಹುದು. ನಾನು ನಿಮ್ಮನ್ನ ಸಮುದ್ರದ ರೈತರು ಎಂದು ಭಾವಿಸಿದ್ದೇನೆ. ದೆಹಲಿಯಲ್ಲಿ ರೈತರಿಗಾಗಿ ಸಚಿವಾಲಯ ಇದೆ ಎಂದ ಮೇಲೆ ಸಮುದ್ರದ ರೈತರಿಗೇಕೆ ಪ್ರತ್ಯೇಕ ಸಚಿವಾಲಯ ಇರಬಾರದು ಎಂದು ಪ್ರಶ್ನೆ ಮಾಡಿದ್ದಾರೆ.
ರಾಹುಲ್ ಗಾಂಧಿ ಈ ರೀತಿ ಹೇಳಿಕೆ ನೀಡುತ್ತಿದ್ದಂತೆಯೇ ಬಿಜೆಪಿ ನಾಯಕರು ಟಾಂಗ್ ಕೊಡೋಕೆ ಆರಂಭಿಸಿದ್ದಾರೆ. ಟ್ವಿಟರ್ನಲ್ಲಿ ರಾಹುಲ್ ಗಾಂಧಿ ವಿರುದ್ಧ ಅಪಹಾಸ್ಯದ ಸುರಿಮಳೆಯೇ ಶುರುವಾಗಿದೆ.
ಅಂದಹಾಗೆ ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ಹೈನುಗಾರಿಕಾ ಸಚಿವಾಲಯವನ್ನ ಪ್ರಧಾನಿ ಮೋದಿ ಮೇ 2019ರಲ್ಲೇ ಪ್ರಾರಂಭಿಸಿದ್ದಾರೆ ಹಾಗೂ ಪ್ರಸ್ತುತ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಇದರ ನೇತೃತ್ವ ವಹಿಸಿದ್ದಾರೆ.