alex Certify ಬಿಜೆಪಿ ಶಾಸಕನ ಪೂರ್ವಯೋಜಿತ ಕೊಲೆ: ಪತ್ನಿ ಗಂಭೀರ ಆರೋಪ, ಸಿಬಿಐ ತನಿಖೆಗೆ ಮನವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಶಾಸಕನ ಪೂರ್ವಯೋಜಿತ ಕೊಲೆ: ಪತ್ನಿ ಗಂಭೀರ ಆರೋಪ, ಸಿಬಿಐ ತನಿಖೆಗೆ ಮನವಿ

ಪಶ್ಚಿಮ ಬಂಗಾಳದ ಹೆಮ್ಟಾಬಾದ್ ಬಿಜೆಪಿ ಶಾಸಕ ದೇವೇಂದ್ರನಾಥ್ ರಾಯ್ ಅವರ ಸಾವು ಆತ್ಮಹತ್ಯೆಯಲ್ಲ, ಪೂರ್ವಯೋಜಿತ ಕೊಲೆ ಎಂದು ಅವರ ಪತ್ನಿ ಚಂಡಿಮಾ ರಾಯ್ ಆರೋಪಿಸಿದ್ದಾರೆ.

ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಅವರು ಕೊಲ್ಕತ್ತಾ ಹೈಕೋರ್ಟ್ ಗೆ ಶುಕ್ರವಾರ ಅರ್ಜಿ ಸಲ್ಲಿಸಿದ್ದಾರೆ. ಶಾಸಕ ದೇವೇಂದ್ರನಾಥ್ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಉತ್ತರ ದಿನಾಜ್ ಜಿಲ್ಲೆಯ ಬಿಂದಾಲ್ ಗ್ರಾಮದಲ್ಲಿ ಕಂಡುಬಂದಿತ್ತು. ಅವರ ಮನೆಯಿಂದ ಒಂದು ಕಿಲೋಮೀಟರ್ ದೂರದ ಅಂಗಡಿ ಮಳಿಗೆ ಹೊರಗೆ ಅವರ ಮೃತದೇಹ ಕಂಡು ಬಂದಿದ್ದು ಅವರೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ಹಸ್ತಾಂತರಿಸಿದೆ. ಅವರ ಪತ್ನಿ ಚಂಡಿಮಾ ರಾಯ್ ಇದೊಂದು ಪೂರ್ವ ನಿಯೋಜಿತ ಕೊಲೆ ಎಂದು ಆರೋಪಿಸಿದ್ದು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಕೊಲ್ಕತ್ತಾ ಹೈಕೋರ್ಟ್ ಶುಕ್ರವಾರ ಅರ್ಜಿ ಸಲ್ಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...