ಎಲ್ಲ ಕ್ರಿಯೆಗೂ ಸಮನಾದ ಪ್ರತಿಕ್ರಿಯೆ ಕೊಡಲೇಬೇಕಲ್ಲವೆ ಎಂದು ಹೇಳುವ ಮೂಲಕ ತಮ್ಮ ಸಹಾಯಕ ಮಾಡಿದ ಕೊಲೆಯನ್ನ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಸಮರ್ಥಿಸಿಕೊಂಡಿದ್ದಾರೆ.
ಶಾಸಕ ಸುರೇಂದ್ರ ಸಿಂಗ್ ಆಪ್ತ ಧಿರೇಂದ್ರ ಸಿಂಗ್ ಜೈ ಪ್ರಕಾಶ್ ಪಾಲ್ ಎಂಬವರ ಮೇಲೆ ಫೈರಿಂಗ್ ನಡೆಸಿದ ಪ್ರಕರಣ ಸಂಬಂಧ ಈ ರೀತಿಯ ಹೇಳಿಕೆ ನೀಡಿದ್ದಾರೆ. ಉತ್ತರ ಪ್ರದೇಶ ದುರ್ಜಾಂಪುರ ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿಯ ದರ ಹಂಚಿಕೆ ಸಂಬಂಧ ಚರ್ಚೆ ನಡೆಸಲು ಅಧಿಕಾರಿಗಳ ಸಭೆ ಕರೆಯಲಾಗಿತ್ತು. ಈ ವೇಳೆ ಶಾಸಕರ ಸಹಾಯಕ ಧಿರೇಂದ್ರ ಸಿಂಗ್ ತನ್ನ ವೈರಿ ಜೈ ಪ್ರಕಾಶ್ ಎಂಬವರ ಮೇಲೆ ನಾಲ್ಕು ಸುತ್ತು ಫೈರಿಂಗ್ ಮಾಡಿದ್ದಾರೆ.
ಇದನ್ನ ಆತ್ಮರಕ್ಷಣೆ ಎಂದು ಸಮರ್ಥಿಸಿಕೊಂಡ ಸುರೇಂದ್ರ ಸಿಂಗ್, ಯಾರದ್ದೋ ಅಪ್ಪ, ತಾಯಿ ಅಥವಾ ಸಹೋದರರನ್ನ ಹೊಡೆದರೆ ಆ ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ನೀಡಲೇಬೇಕಾಗುತ್ತೆ ಅನ್ನೋದು ನನ್ನ ಅಭಿಪ್ರಾಯ ಅಂತಾ ಹೇಳಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರೋ ಸಂತ್ರಸ್ತರ ಕುಟುಂಬ, ಬಿಜೆಪಿ ನಾಯಕರು ಹಾಗೂ ಉತ್ತರ ಪ್ರದೇಶ ಪೊಲೀಸರು ಆರೋಪಿಗೆ ಬೆಂಬಲ ನೀಡ್ತಿದ್ದಾರೆ ಅಂತಾ ಆರೋಪಿಸಿದ್ದಾರೆ.
ಈ ಹತ್ಯೆ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡುತ್ತಿದ್ದಂತೆ, ಸರ್ಕಲ್ ಆಫೀಸರ್ ಮತ್ತು ಇತರ ಮೂವರು ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಿತು.