alex Certify 876 ಕೋಟಿ ರೂಪಾಯಿ ದೇಣಿಗೆಯಲ್ಲಿ ಬಿಜೆಪಿ ಪಾಲೆಷ್ಟು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

876 ಕೋಟಿ ರೂಪಾಯಿ ದೇಣಿಗೆಯಲ್ಲಿ ಬಿಜೆಪಿ ಪಾಲೆಷ್ಟು ಗೊತ್ತಾ…?

2018-19ನೇ ಸಾಲಿನಲ್ಲಿ ವಿವಿಧ ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ಕಾರ್ಪೋರೇಟ್​ಗಳು ಹಾಗೂ ವ್ಯಾಪಾರ ಸಂಸ್ಥೆಗಳು 876.10 ಕೋಟಿ ರೂಪಾಯಿ ದೇಣಿಗೆಯನ್ನ ನೀಡಿದ್ದು ಇದರಲ್ಲಿ ಬಿಜೆಪಿ ಅತಿ ಹೆಚ್ಚು ದೇಣಿಗೆಯನ್ನ ಸಂಪಾದಿಸಿದೆ ಅಂತಾ ಮತದಾನದ ಹಕ್ಕುಗಳ ಅಸೋಸಿಯೇಷನ್​​ ವರದಿ ಮಾಡಿದೆ.

876 ಕೋಟಿ ರೂಪಾಯಿ ದೇಣಿಗೆಯಲ್ಲಿ ಬಿಜೆಪಿ 698 ಕೋಟಿ ರೂಪಾಯಿ ಹಣ ಪಡೆದು ಮೊದಲನೇ ಸ್ಥಾನದಲ್ಲಿದ್ದರೆ ಕಾಂಗ್ರೆಸ್​ ತನ್ನ ಬೊಕ್ಕಸಕ್ಕೆ 122.5 ಕೋಟಿ ರೂಪಾಯಿಯನ್ನ ಹಾಕಿಕೊಳ್ಳುವ ಮೂಲಕ ಎರಡನೇ ಸ್ಥಾನವನ್ನ ಪಡೆದಿದೆ ಅಂತಾ ಎಡಿಆರ್​ ತನ್ನ ಸಮೀಕ್ಷೆಯಲ್ಲಿ ಹೇಳಿದೆ.

ನಮ್ಮಲ್ಲಿರುವ 5 ರಾಷ್ಟ್ರೀಯ ಪಕ್ಷಗಳ ಪೈಕಿ ಬಿಜೆಪಿ 1573 ಕಾರ್ಪೋರೇಟ್​ ದಾನಿಗಳಿಂದ 698.082 ಕೋಟಿ ರೂಪಾಯಿ ಗಳಿಸಿದೆ. ಕಾಂಗ್ರೆಸ್​​ಗೆ 122 ಕಾರ್ಪೋರೇಟ್​ ದಾನಿಗಳು ಒಟ್ಟು 122 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಹಾಗೂ 17 ಕಾರ್ಪೋರೇಟರರ್ಸ್​ನಿಂದ 11.345 ಕೋಟಿ ರೂಪಾಯಿ ದೇಣಿಗೆ ಪಡೆದಿರುವ ಎನ್​ಸಿಪಿ ಮೂರನೇ ಸ್ಥಾನದಲ್ಲಿದೆ.

2018-19ನೇ ಹಣಕಾಸು ವರ್ಷದಲ್ಲಿ ಕಾರ್ಪೋರೇಟ್​ ಹಾಗೂ ವ್ಯಾಪಾರ ಸಂಸ್ಥೆಗಳು ನೀಡಿದ 876.10 ಕೋಟಿ ರೂಪಾಯಿಗಳಲ್ಲಿ 20.54 ಕೋಟಿ ರೂಪಾಯಿಯನ್ನ ಯಾವುದೇ ದಾಖಲಗಳನ್ನೇ ಹೊಂದದ ಕಂಪನಿಗಳಿಂದ ಪಡೆಯಲಾಗಿದೆ ಅಂತಾ ಎಡಿಆರ್​ ವರದಿ ನೀಡಿದೆ.

ಪ್ಯಾನ್​ ವಿವರ ಹೊಂದಿರದ 34 ಕಡೆಗಳಿಂದ ರಾಷ್ಟ್ರೀಯ ಪಕ್ಷಗಳು 13.57 ಕೋಟಿ ರೂಪಾಯಿ ದೇಣಿಗೆ ರೂಪದಲ್ಲಿ ಪಡೆದಿದೆ. ಇದರಲ್ಲಿ 13.364 ಕೋಟಿ ರೂಪಾಯಿ ಬಿಜೆಪಿಗೆ ಸೇರಿದೆ ಅಂತಾ ವರದಿ ಹೇಳಿದೆ. ಈ ರೀತಿ ದಾಖಲೆಗಳೇ ಇಲ್ಲದ ಮೂಲಗಳಿಂದ ಪಡೆದ ದೇಣಿಗೆಗಳಿಗೆ ಸೂಕ್ತ ದಾಖಲೆ ಒದಗಿಸುವಂತೆ ಸೂಚನೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...