2018-19ನೇ ಸಾಲಿನಲ್ಲಿ ವಿವಿಧ ರಾಷ್ಟ್ರೀಯ ರಾಜಕೀಯ ಪಕ್ಷಗಳಿಗೆ ಕಾರ್ಪೋರೇಟ್ಗಳು ಹಾಗೂ ವ್ಯಾಪಾರ ಸಂಸ್ಥೆಗಳು 876.10 ಕೋಟಿ ರೂಪಾಯಿ ದೇಣಿಗೆಯನ್ನ ನೀಡಿದ್ದು ಇದರಲ್ಲಿ ಬಿಜೆಪಿ ಅತಿ ಹೆಚ್ಚು ದೇಣಿಗೆಯನ್ನ ಸಂಪಾದಿಸಿದೆ ಅಂತಾ ಮತದಾನದ ಹಕ್ಕುಗಳ ಅಸೋಸಿಯೇಷನ್ ವರದಿ ಮಾಡಿದೆ.
876 ಕೋಟಿ ರೂಪಾಯಿ ದೇಣಿಗೆಯಲ್ಲಿ ಬಿಜೆಪಿ 698 ಕೋಟಿ ರೂಪಾಯಿ ಹಣ ಪಡೆದು ಮೊದಲನೇ ಸ್ಥಾನದಲ್ಲಿದ್ದರೆ ಕಾಂಗ್ರೆಸ್ ತನ್ನ ಬೊಕ್ಕಸಕ್ಕೆ 122.5 ಕೋಟಿ ರೂಪಾಯಿಯನ್ನ ಹಾಕಿಕೊಳ್ಳುವ ಮೂಲಕ ಎರಡನೇ ಸ್ಥಾನವನ್ನ ಪಡೆದಿದೆ ಅಂತಾ ಎಡಿಆರ್ ತನ್ನ ಸಮೀಕ್ಷೆಯಲ್ಲಿ ಹೇಳಿದೆ.
ನಮ್ಮಲ್ಲಿರುವ 5 ರಾಷ್ಟ್ರೀಯ ಪಕ್ಷಗಳ ಪೈಕಿ ಬಿಜೆಪಿ 1573 ಕಾರ್ಪೋರೇಟ್ ದಾನಿಗಳಿಂದ 698.082 ಕೋಟಿ ರೂಪಾಯಿ ಗಳಿಸಿದೆ. ಕಾಂಗ್ರೆಸ್ಗೆ 122 ಕಾರ್ಪೋರೇಟ್ ದಾನಿಗಳು ಒಟ್ಟು 122 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಹಾಗೂ 17 ಕಾರ್ಪೋರೇಟರರ್ಸ್ನಿಂದ 11.345 ಕೋಟಿ ರೂಪಾಯಿ ದೇಣಿಗೆ ಪಡೆದಿರುವ ಎನ್ಸಿಪಿ ಮೂರನೇ ಸ್ಥಾನದಲ್ಲಿದೆ.
2018-19ನೇ ಹಣಕಾಸು ವರ್ಷದಲ್ಲಿ ಕಾರ್ಪೋರೇಟ್ ಹಾಗೂ ವ್ಯಾಪಾರ ಸಂಸ್ಥೆಗಳು ನೀಡಿದ 876.10 ಕೋಟಿ ರೂಪಾಯಿಗಳಲ್ಲಿ 20.54 ಕೋಟಿ ರೂಪಾಯಿಯನ್ನ ಯಾವುದೇ ದಾಖಲಗಳನ್ನೇ ಹೊಂದದ ಕಂಪನಿಗಳಿಂದ ಪಡೆಯಲಾಗಿದೆ ಅಂತಾ ಎಡಿಆರ್ ವರದಿ ನೀಡಿದೆ.
ಪ್ಯಾನ್ ವಿವರ ಹೊಂದಿರದ 34 ಕಡೆಗಳಿಂದ ರಾಷ್ಟ್ರೀಯ ಪಕ್ಷಗಳು 13.57 ಕೋಟಿ ರೂಪಾಯಿ ದೇಣಿಗೆ ರೂಪದಲ್ಲಿ ಪಡೆದಿದೆ. ಇದರಲ್ಲಿ 13.364 ಕೋಟಿ ರೂಪಾಯಿ ಬಿಜೆಪಿಗೆ ಸೇರಿದೆ ಅಂತಾ ವರದಿ ಹೇಳಿದೆ. ಈ ರೀತಿ ದಾಖಲೆಗಳೇ ಇಲ್ಲದ ಮೂಲಗಳಿಂದ ಪಡೆದ ದೇಣಿಗೆಗಳಿಗೆ ಸೂಕ್ತ ದಾಖಲೆ ಒದಗಿಸುವಂತೆ ಸೂಚನೆ ನೀಡಿದೆ.