
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಅತ್ಯಪರೂಪದ ಹಾಗೂ ಅಷ್ಟೇ ಅಚ್ಚರಿಯ ಘಟನೆಯೊಂದರಲ್ಲಿ, ಮಹಿಳೆಯೊಬ್ಬರು ತನ್ನ ಪತಿಗೆ ವಿಚ್ಛೇದನ ಕೊಟ್ಟಿದ್ದಾರೆ. ಇದರಲ್ಲೇನು ವಿಶೇಷ ಎಂದಿರಾ? ಅಲ್ಲೇ ಇರೋದು ನೋಡಿ ಸ್ವಾರಸ್ಯ.
ತನ್ನ ಪತಿ ಆತನ ಗರ್ಲ್‌ಫ್ರೆಂಡ್ ಜೊತೆಗೆ ಮದುವೆ ಮಾಡಿಕೊಳ್ಳಲಿ ಎಂದು ಈ ಮಹಿಳೆ ಖುದ್ದು ತಾನೇ ಮುಂದೆ ಬಂದು ಆತನಿಗೆ ವಿಚ್ಛೇದನ ನೀಡಿದ್ದಾರೆ. ಏಕಕಾಲದಲ್ಲಿ ಇಬ್ಬರು ಸಂಗಾತಿಗಳೊಂದಿಗೆ ವೈವಾಹಿಕ ಜೀವನ ನಡೆಸುವುದು ಕಾನೂನಾತ್ಮಕವಾಗಿ ಸಾಧ್ಯವಿಲ್ಲದೇ ಇದ್ದ ಕಾರಣ ಈ ಮಹಿಳೆ ತನ್ನ ಪತಿಗೆ ಈ ರೀತಿಯಲ್ಲಿ ಸಹಾಯ ಮಾಡಿದ್ದಾರೆ.
ತನ್ನ ಪತಿಯ ಸಂತೋಷಕ್ಕಾಗಿ ತನ್ನ ಮೂರು ವರ್ಷಗಳ ವೈವಾಹಿಕ ಜೀವನವನ್ನೇ ಕಡಿದುಕೊಂಡು ಈ ರೀತಿಯ ತ್ಯಾಗ ಮಾಡಿದ ಈ ಮಹಿಳೆ ಬಗ್ಗೆ ಕೆಲ ನೆಟ್ಟಿಗರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
