ರಾಜಸ್ಥಾನದಲ್ಲಿ ಹಕ್ಕಿ ಜ್ವರ ಸಂಭವಿಸುತ್ತಿರುವ ಪ್ರದೇಶಗಳಿಂದ ಮಾದರಿ ಸಂಗ್ರಹಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಜ್ವರ ಲಕ್ಷಣ ಕಂಡುಬಂದವರನ್ನ ಗುರುತಿಸುವ ಪ್ರಕ್ರಿಯೆಯೂ ರಾಜ್ಯದಲ್ಲಿ ಆರಂಭವಾಗಿದೆ.
ರಾಜಸ್ಥಾನದ ಜವಹರಲಾಲ್ ನಗರದಿಂದ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಶೀತ, ಕೆಮ್ಮು ಹಾಗೂ ಜ್ವರ ಇರುವವರನ್ನ ಪತ್ತೆ ಹಚ್ಚಲು ಏಜನ್ಸಿಗಳನ್ನ ಸ್ಥಾಪನೆ ಮಾಡಲಾಗಿದೆ. ಈ ಮಧ್ಯೆ ಜವಹಾರ ಲಾಲ್ ನಗರದಲ್ಲಿ ಸತ್ತ ಕಾಗೆಗಳಲ್ಲಿ ಭೀಕರ ವೈರಸ್ ಇರೋದು ಪತ್ತೆಯಾದ ಬಳಿಕ ರಾಜಸ್ಥಾನದಲ್ಲಿ ಹಕ್ಕಿ ಜ್ವರದ ಎಚ್ಚರಿಕೆಯನ್ನ ನೀಡಲಾಗಿದೆ.
ಪಶುಸಂಗೋಪನಾ ಇಲಾಖೆಯು ರಾಜ್ಯಮಟ್ಟದ ನಿಯಂತ್ರಣ ಕೊಠಡಿಗಳನ್ನ ಸ್ಥಾಪನೆ ಮಾಡಿದೆ. ರಾಜ್ಯದಲ್ಲಿ 252ಕ್ಕೂ ಹೆಚ್ಚು ಪಕ್ಷಿಗಳು ಭೀಕರ ವೈರಸ್ನಿಂದ ಸಾವನ್ನಪ್ಪಿವೆ ಎನ್ನಲಾಗಿದೆ. ಹಕ್ಕಿ ಜ್ವರದಿಂದ ಸಾವಿಗೀಡಾದ ಹಕ್ಕಿಗಳಲ್ಲಿ ಕಾಗೆಗಳ ಸಾವು ಹೆಚ್ಚಾಗಿದೆ. ಅದರಲ್ಲೂ ಕೋಟಾ ಹಾಗೂ ಜೋದ್ಪುರದಲ್ಲಿ ಅತಿ ಹೆಚ್ಚು ಸಾವು ವರದಿಯಾಗಿದೆ.