
ವಿಡಿಯೋದಲ್ಲಿ ತಳ್ಳು ಗಾಡಿಯಲ್ಲಿ ಫ್ಲೈ ಓವರ್ ಮೇಲೆ ಸಾಗುತ್ತಿದ್ದ ಬಡ ದಂಪತಿಗೆ ಬೈಕ್ ಸವಾರನೊಬ್ಬ ನೆರವಾಗಿದ್ದಾನೆ. ರಮ್ಮಿ ರೈಡರ್ ಎಂದು ಯುಟ್ಯೂಬ್ಗಳಲ್ಲಿ ಗುರುತಿಸಲ್ಪಟ್ಟ ಬೈಕ್ ಸವಾರನೊಬ್ಬ ದಂಪತಿಗೆ ಸಹಾಯ ಮಾಡೋದಾಗಿ ಹೇಳಿದ್ದಾನೆ.
ಕೂಡಲೇ ಮಹಿಳೆ ತಳ್ಳು ಗಾಡಿಯ ಮುಂಭಾಗದಲ್ಲಿ ಕುಳಿತುಕೊಂಡಿದ್ದಾಳೆ. ಬೈಕ್ ಸವಾರ ತನ್ನ ಕಾಲಿನಿಂದ ಗಾಡಿಯನ್ನ ತಳ್ಳುವ ಮೂಲಕ ದಂಪತಿಗೆ ನೆರವಾಗಿದ್ದಾನೆ.
ಮಾನವೀಯತೆ ಇನ್ನೂ ಜೀವಂತವಾಗಿದೆ..! ಬೈಕ್ ಸವಾರ, ದಂಪತಿಯ ರಿಕ್ಷಾ ಚಲಾಯಿಸಲು ಸಹಾಯ ಮಾಡಿದ್ದಾನೆ ಎಂದು ವೀರೇಂದ್ರ ಸೆಹ್ವಾಗ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.