
ಅದೇ ರೀತಿ ಬಿಹಾರದಲ್ಲಿ ಆರರಿಂದ ಎಂಟನೇ ತರಗತಿಗಳು ಫೆಬ್ರವರಿ 8ರಿಂದ ಆರಂಭಗೊಳ್ಳಲಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಕೊರೊನಾ ಮಾರ್ಗಸೂಚಿಗಳನ್ನ ಅನುಸರಿಸಿ ತರಗತಿಗಳನ್ನ ತೆಗೆದುಕೊಳ್ಳುವಂತೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ.
ಮಾಸ್ಕ್ ಧರಿಸೋದು, ಸಾಮಾಜಿಕ ಅಂತರ ಕಾಪಾಡೋದು ಕಡ್ಡಾಯವಾಗಿರಲಿದೆ. ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೂಕ್ತ ಮುಂಜಾಗ್ರತಾ ಕ್ರಮದ ಜೊತೆ ಶಾಲೆಗೆ ಆಗಮಿಸಲು ಸೂಚಿಸಲಾಗಿದೆ.
ಬಿಹಾರದಲ್ಲಿ ಮೊದಲ ಲಾಕ್ಡೌನ್ನಿಂದ ಎಲ್ಲಾ ಶಾಲೆಗಳು ಬಂದ್ ಆಗಿದ್ದವು. ಈಗೀಗ ಹಂತ ಹಂತವಾಗಿ ಒಂದೊಂದೇ ತರಗತಿಗಳನ್ನ ಆರಂಭಿಸಲಾಗುತ್ತಿದೆ.