alex Certify ನಿಮ್ಮೂರು ವಿಕಾಸವಾಯ್ತಾ ಎಂಬ ಪ್ರಶ್ನೆಗೆ ಗ್ರಾಮಸ್ಥ ಹೇಳಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮೂರು ವಿಕಾಸವಾಯ್ತಾ ಎಂಬ ಪ್ರಶ್ನೆಗೆ ಗ್ರಾಮಸ್ಥ ಹೇಳಿದ್ದೇನು…?

ಬಿಹಾರ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಅಲ್ಲಿನ ಗ್ರೌಂಡ್ ರಿಪೋರ್ಟಿಂಗ್ ಮಾಡುತ್ತಿರುವ ವೇಳೆ ಮಾಧ್ಯಮದ ವರದಿಗಾರರೊಬ್ಬರು ಗ್ರಾಮಸ್ಥರನ್ನು ತಮ್ಮೂರಿಗೆ ’ವಿಕಾಸ’ ಬಂದಿದೆಯೇ ಎಂದು ಕೇಳಿರುವುದಕ್ಕೆ ಆತ ಕೊಟ್ಟ ಉತ್ತರದ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಲಾಗಿದೆ.

“ವಿಕಾಸ್‌….. ನಾನು ಇಲ್ಲಿ ಇರಲಿಲ್ಲ ಸರ್‌. ನನಗೆ ಆರೋಗ್ಯ ಸರಿ ಇಲ್ಲದ ಕಾರಣ ನಾನು ವೈದ್ಯರ ಬಳಿ ಇದ್ದೆ” ಎಂದಿದ್ದಾರೆ ಈ ಹಿರಿಯ ಗ್ರಾಮಸ್ಥ. ಇದೇ ವೇಳೆ ಅಲ್ಲಿ ನೆರೆದಿದ್ದ ಮಿಕ್ಕವರನ್ನೆಲ್ಲಾ ಅಭಿವೃದ್ಧಿ ಕುರಿತ ಪ್ರಶ್ನೆಗಳನ್ನು ಕೇಳಿದಾಗ ಬಹಳಷ್ಟು ಮಂದಿ ಅದೊಂದು ಜೋಕ್ ಎಂಬಂತೆ ನಕ್ಕು ನಕ್ಕು ಇಟ್ಟಿದ್ದಾರೆ.

ಇದೇ ವಿಡಿಯೋ ಮೇಲೆ ಸಾಕಷ್ಟು ವ್ಯಂಗ್ಯಭರಿತ ಮೆಮೆಗಳು ಟ್ವಿಟರ್‌ನಲ್ಲಿ ಹರಿದಾಡುತ್ತಿದ್ದು, ದೇಶದ ರಾಜಕಾರಣದಲ್ಲಿ ಅಭಿವೃದ್ಧಿಯ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವುದು ಎಂಬುದೆಲ್ಲಾ ಒಂದು ದೊಡ್ಡ ಭ್ರಮೆ ಎಂಬ ಭಾವ ಮೂಡುವಂತೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...