
125 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ ಎನ್ಡಿಎ ಬಿಹಾರ ಗೆಲುವಿನ ಚುಕ್ಕಾಣಿಯನ್ನ ತನ್ನದಾಗಿಸಿಕೊಂಡಿದೆ. ಆದರೆ ಪಕ್ಷಗಳ ನಡುವಿನ ಮತಗಳನ್ನ ನೋಡೋದಾದ್ರೆ ಆರ್ಜೆಡಿ 75 ಸ್ಥಾನಗಳನ್ನ ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಬಿಜೆಪಿ 74 ಸ್ಥಾನಗಳನ್ನ ಗೆದ್ರೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಕೇವಲ 43 ಸ್ಥಾನಗಳಲ್ಲಿ ವಿಜಯದ ನಗೆ ಬೀರಿದೆ. ಇತ್ತ ಕಾಂಗ್ರೆಸ್ 19 ಕ್ಷೇತ್ರಗಳನ್ನ ತನ್ನದಾಗಿಸಿ ಕೊಂಡಿದೆ.
ಎನ್ಡಿಎಎ ಮೈತ್ರಿಕೂಟ ಬಿಹಾರದಲ್ಲಿ ಗೆಲುವನ್ನ ಸಂಪಾದಿಸುತ್ತಿದ್ದಂತೆಯೇ ಅಭಿಮಾನಿಗಳ ಹರ್ಷ ಮುಗಿಲುಮುಟ್ಟಿತ್ತು. ಬಿಹಾರಿ ಭಾಷೆಯಲ್ಲೇ ನಿತಿನ್ ಕುಮಾರ್ಗೆ ಶುಭಕೋರಿದ ಸಾಕಷ್ಟು ಪೋಸ್ಟರ್ಗಳು ಪಾಟ್ನಾದಾದ್ಯಂತ ಹಾರಾಡುತ್ತಿವೆ.