alex Certify ನೆಚ್ಚಿನ ಪ್ರಾಣಿಗೆ ಅದ್ಧೂರಿ ಬರ್ತಡೇ ಪಾರ್ಟಿ…..! ವೈರಲ್‌ ಆಯ್ತು ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಚ್ಚಿನ ಪ್ರಾಣಿಗೆ ಅದ್ಧೂರಿ ಬರ್ತಡೇ ಪಾರ್ಟಿ…..! ವೈರಲ್‌ ಆಯ್ತು ಫೋಟೋ

ರುಚಿಕರವಾದ ಕೇಕ್​, ಬಾಯಲ್ಲಿ ನೀರೂರಿಸುವ ಖಾದ್ಯಗಳು ಹಾಗೂ ಬೆರಳಣಿಕೆಯಷ್ಟು ಅತಿಥಿಗಳು ಬರ್ತಡೇ ಪಾರ್ಟಿಯಲ್ಲಿ ಇರೋದು ಸರ್ವೇ ಸಾಮಾನ್ಯ. ಬಿಹಾರದಲ್ಲೂ ಕೂಡ ಇದೇ ರೀತಿಯ ಬರ್ತಡೇ ಪಾರ್ಟಿಯೊಂದನ್ನ ಆಚರಿಸಲಾಗಿತ್ತು. ಆದರೆ ವಿಶೇಷ ಅಂದ್ರೆ ಇಲ್ಲಿ ಬರ್ತಡೇ ಪಾರ್ಟಿ ನಡೆದದ್ದು ಮಾತ್ರ ಕುದುರೆಯದ್ದು..!

ರಜನೀಶ್​ ಕುಮಾರ್​ ಅಲಿಯಾಸ್ ಗೋಲು ಯಾದವ್​ ಎಂಬವರು ಸಹಸ್ರ ಜಿಲ್ಲೆಯ ಪಂಚವಟಿ ಚೌಕ್​ನ ನಿವಾಸಿಯಾಗಿದ್ದು, ತಮ್ಮ ಕುದುರೆ ಚೇತಕ್​ನ 2ನೇ ವರ್ಷದ ಜನ್ಮದಿನೋತ್ಸವವನ್ನ ಆಚರಿಸಿದ್ದಾರೆ.

ಗೋಲುಗೆ ಚೇತಕ್​ ಅಂದ್ರೆ ಪಂಚಪ್ರಾಣ. ತನ್ನ ಸ್ವಂತ ಮಗುವಿನಂತೆ ಕುದುರೆಯನ್ನ ಸಾಕಿದ್ದರಿಂದ ಅದರ ಜನ್ಮದಿನವನ್ನೂ ಅದ್ಧೂರಿಯಾಗಿ ಮಾಡಿದ್ದಾರೆ.

ನನ್ನ ಸ್ವಂತ ಮಗುವಿನಂತೆಯೇ ಚೇತಕ್​ನನ್ನು ಸಾಕಿದ್ದೇನೆ. ನನ್ನ ಮಕ್ಕಳಿಗೆ ಕೊಡುವ ಪ್ರೀತಿಗಿಂತಲೂ ಒಂದು ಹಿಡಿ ಹೆಚ್ಚು ಪ್ರೀತಿಯನ್ನ ಚೇತಕ್​ಗೆ ನೀಡಿದ್ದೇನೆ ಅಂತಾರೆ ಗೋಲು.

ಚೇತಕ್​​ಗೆ ಸ್ನಾನ ಮಾಡಿಸಿ ಸಂಜೆಯ ಬರ್ತಡೇ ಪಾರ್ಟಿಗೆ ಸಿದ್ಧ ಮಾಡಲಾಯ್ತು. ಬಳಿಕ ಚೇತಕ್​ ಮುಂದೆ 50 ಪೌಂಡ್​​ ಕೇಕ್​ನ್ನು ಇರಿಸಿದ್ರು. ಕೇಕ್​ ಮೇಲೆ ಕುದುರೆಯ ಚಿತ್ರ ಹಾಗೂ ಹೆಸರನ್ನ ಬರೆಯಲಾಗಿದೆ. ಚೇತಕ್​ ಮಾಲೀಕ ಗೋಲು ಕೇಕ್​ ಕತ್ತರಿಸುತ್ತಿದ್ದಂತೆಯೇ ಪಟಾಕಿ ಸಿಡಿಸಲಾಯ್ತು. ಅತಿಥಿಗಳಿಗೆ ಸಸ್ಯಾಹಾರಿ ಹಾಗೂ ಮಾಂಸಾಹಾರ ಖಾದ್ಯಗಳನ್ನ ತಯಾರು ಮಾಡಲಾಗಿತ್ತು. ಸಿಕ್ಕಾಪಟ್ಟೆ ಮಂದಿ ಈ ಬರ್ತಡೇ ಪಾರ್ಟಿಗೆ ಸಾಕ್ಷಿಯಾದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...