
ರಜನೀಶ್ ಕುಮಾರ್ ಅಲಿಯಾಸ್ ಗೋಲು ಯಾದವ್ ಎಂಬವರು ಸಹಸ್ರ ಜಿಲ್ಲೆಯ ಪಂಚವಟಿ ಚೌಕ್ನ ನಿವಾಸಿಯಾಗಿದ್ದು, ತಮ್ಮ ಕುದುರೆ ಚೇತಕ್ನ 2ನೇ ವರ್ಷದ ಜನ್ಮದಿನೋತ್ಸವವನ್ನ ಆಚರಿಸಿದ್ದಾರೆ.
ಗೋಲುಗೆ ಚೇತಕ್ ಅಂದ್ರೆ ಪಂಚಪ್ರಾಣ. ತನ್ನ ಸ್ವಂತ ಮಗುವಿನಂತೆ ಕುದುರೆಯನ್ನ ಸಾಕಿದ್ದರಿಂದ ಅದರ ಜನ್ಮದಿನವನ್ನೂ ಅದ್ಧೂರಿಯಾಗಿ ಮಾಡಿದ್ದಾರೆ.
ನನ್ನ ಸ್ವಂತ ಮಗುವಿನಂತೆಯೇ ಚೇತಕ್ನನ್ನು ಸಾಕಿದ್ದೇನೆ. ನನ್ನ ಮಕ್ಕಳಿಗೆ ಕೊಡುವ ಪ್ರೀತಿಗಿಂತಲೂ ಒಂದು ಹಿಡಿ ಹೆಚ್ಚು ಪ್ರೀತಿಯನ್ನ ಚೇತಕ್ಗೆ ನೀಡಿದ್ದೇನೆ ಅಂತಾರೆ ಗೋಲು.
ಚೇತಕ್ಗೆ ಸ್ನಾನ ಮಾಡಿಸಿ ಸಂಜೆಯ ಬರ್ತಡೇ ಪಾರ್ಟಿಗೆ ಸಿದ್ಧ ಮಾಡಲಾಯ್ತು. ಬಳಿಕ ಚೇತಕ್ ಮುಂದೆ 50 ಪೌಂಡ್ ಕೇಕ್ನ್ನು ಇರಿಸಿದ್ರು. ಕೇಕ್ ಮೇಲೆ ಕುದುರೆಯ ಚಿತ್ರ ಹಾಗೂ ಹೆಸರನ್ನ ಬರೆಯಲಾಗಿದೆ. ಚೇತಕ್ ಮಾಲೀಕ ಗೋಲು ಕೇಕ್ ಕತ್ತರಿಸುತ್ತಿದ್ದಂತೆಯೇ ಪಟಾಕಿ ಸಿಡಿಸಲಾಯ್ತು. ಅತಿಥಿಗಳಿಗೆ ಸಸ್ಯಾಹಾರಿ ಹಾಗೂ ಮಾಂಸಾಹಾರ ಖಾದ್ಯಗಳನ್ನ ತಯಾರು ಮಾಡಲಾಗಿತ್ತು. ಸಿಕ್ಕಾಪಟ್ಟೆ ಮಂದಿ ಈ ಬರ್ತಡೇ ಪಾರ್ಟಿಗೆ ಸಾಕ್ಷಿಯಾದ್ರು.
