ಬಿಹಾರ ಮುಖ್ಯಮಂತ್ರಿ ಸ್ಥಾನದಿಂದ ನಿತೀಶ್ ಕುಮಾರ್ರನ್ನ ಕೆಳಗಿಳಿಸುವಲ್ಲಿ ವಿಫಲವಾದರೂ ಸಹ ಬಿಹಾರದಲ್ಲಿ ಆರ್ಜೆಡಿಯನ್ನ ಅತಿದೊಡ್ಡ ಪಕ್ಷವನ್ನಾಗಿ ಕೊಂಡೊಯ್ಯುವಲ್ಲಿ ಯಶಸ್ವಿಯಾದ ತೇಜಸ್ವಿ ಯಾದವ್, ಜನಾದೇಶ ನನ್ನ ಪರವಾಗಿದೆ ಅಂತಾ ಹೇಳಿದ್ದಾರೆ.
ಪ್ರಧಾನಿ ಮೋದಿ ಹಾಗೂ ನಿತೀಶ್ ಕುಮಾರ್ ಹಣ ಬಲ, ತೋಳ್ಬಲವನ್ನ ಪ್ರಯೋಗಿಸಿದ್ರೂ ಸಹ ಈ 31 ವರ್ಷದ ತೇಜಸ್ವಿಯನ್ನ ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ. ಆರ್ಜೆಡಿ ಏಕೈಕ ದೊಡ್ಡ ಪಕ್ಷಬವಾಗಿ ಹೊರಹೊಮ್ಮೋದನ್ನ ತಪ್ಪಿಸುವಲ್ಲಿ ಅವರು ವಿಫಲರಾಗಿದ್ದಾರೆ. ಇಂದು ನಿತೀಶ್ ಸಿಎಂ ಸ್ಥಾನದಲ್ಲಿ ಕುಳಿತಿರಬಹುದು. ಆದರೆ ಜನಾದೇಶ ನನ್ನ ಪರವಾಗಿದೆ ಅನ್ನೋದು ಅಷ್ಟೇ ಸತ್ಯ ಅಂತಾ ಗುಡುಗಿದ್ದಾರೆ.
ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದು ಜನರು ಬದಲಾವಣೆಗೆ ಆದೇಶ ನೀಡಿದ್ದಾರೆ ಅನ್ನೋದನ್ನ ತೋರಿಸುತ್ತೆ. ನಿತೀಶ್ ಸಿಎಂ ಸ್ಥಾನದಲ್ಲಿ ಇದ್ದಾರೆ. ಆದರೆ ನಾವು ಜನರ ಹೃದಯದಲ್ಲಿ ಇದ್ದೇವೆ ಅಂತಾ ಹೇಳಿದ್ರು.