ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಪ್ರಚಾರ ಜೋರಾಗಿದ್ದು ಮತದಾರರನ್ನು ಒಲಿಸಿಕೊಳ್ಳಲು ನಾನಾ ಭರವಸೆಗಳನ್ನು ರಾಜಕೀಯ ಪಕ್ಷಗಳು ನೀಡತೊಡಗಿವೆ.
ಬಿಜೆಪಿ ಪ್ರಣಾಳಿಕೆಯಲ್ಲಿ ಉಚಿತವಾಗಿ ಕೊರೋನಾ ಲಸಿಕೆ ನೀಡುವುದಾಗಿ ಘೋಷಿಸಲಾಗಿದೆ. ಜೆಡಿಯು -ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಮುಂದಾಗಿರುವ ಆರ್.ಜೆ.ಡಿ. ಕೃಷಿ ಸಾಲ ಮನ್ನಾ ಮತ್ತು 10 ಲಕ್ಷ ಉದ್ಯೋಗದ ಭರವಸೆ ನೀಡಿದೆ.
2020 ರ ವರೆಗಿನ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಮನ್ನಾ ಮಾಡಲಾಗುವುದು ಎಂದು ಆರ್.ಜೆ.ಡಿ. ಪ್ರಣಾಳಿಕೆಯಲ್ಲಿ ಘೋಷಿಸಿದೆ. ರೈತರ ಆದಾಯ ಹೆಚ್ಚಳ, ಧಾನ್ಯಗಳಿಗೆ ಬೆಂಬಲ ಬೆಲೆ, ಶಿಕ್ಷಕರ ನೇಮಕಾತಿ, ಉದ್ದಿಮೆಗಳ ಸ್ಥಾಪನೆ, ಬಂಡವಾಳ ಆಕರ್ಷಣೆ, ಉಚಿತ ಕಂಪ್ಯೂಟರ್ ತರಬೇತಿ ಮೊದಲಾದ ಭರವಸೆಗಳನ್ನು ಆರ್.ಜೆ.ಡಿ. ನೀಡಿದೆ.