![](https://kannadadunia.com/wp-content/uploads/2021/01/pjimage-2021-01-16t161522-1610793935.jpg)
ಬಿಗ್ ಬಾಸ್ 14ರ ವೀಕೆಂಡ್ ಶೋ ಮುಗಿಸಿ ಪಿಸ್ತಾ ವಾಪಸ್ಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಬೈಕ್ನಲ್ಲಿ ಆಕೆ ತನ್ನ ಸಹಾಯಕಿ ಜೊತೆ ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ವೀಕೆಂಡ್ ಶೂಟಿಂಗ್ ಮುಗಿಸಿದ್ದ ಬಿಗ್ ಬಾಸ್ ತಂಡ ಪ್ಯಾಕಪ್ ಮಾಡಿ ಹೊರಡಲು ತಯಾರಾಗಿತ್ತು. ಈ ವೇಳೆ ಪಿಸ್ತಾ ತನ್ನ ಸಹಾಯಕಿ ಜೊತೆ ಆಕ್ಟಿವಾದಲ್ಲಿ ಶೂಟಿಂಗ್ ಸ್ಥಳದಿಂದ ಹೊರಟಿದ್ದಾರೆ. ಕತ್ತಲಾಗಿದ್ದರಿಂದ ರಸ್ತೆಯಲ್ಲಿರುವ ಹೊಂಡ ಕಾಣದ ಹಿನ್ನೆಲೆ ಗಾಡಿ ಆಯತಪ್ಪಿ ಬಿದ್ದಿದೆ. ಅಪಘಾತದಲ್ಲಿ ಪಿಸ್ತಾ ಸಹೋದ್ಯೋಗಿ ಬಲಗಡೆ ಬಿದ್ದರೆ ಪಿಸ್ತಾ ಎಡಗಡೆ ಬಿದ್ದಿದ್ದಾರೆ. ಅದೇ ವೇಳೆ ಬಂದ ವ್ಯಾನಿಟಿ ವ್ಯಾನ್ ಆಕೆಯ ಮೈ ಮೇಲೆ ಹರಿದಿದೆ.
ಬಿಗ್ ಬಾಸ್ ಮಾತ್ರವಲ್ಲದೇ ಖತರೋ ಕಿ ಕಿಲಾಡಿ, ದ ವೈಸ್ ಸೇರಿದಂತೆ ಸಾಕಷ್ಟು ಜನಪ್ರಿಯ ಶೋಗಳಲ್ಲಿ ಪಿಸ್ತಾ ಕೆಲಸ ಮಾಡಿದ್ದಾರೆ. ಪಿಸ್ತಾ ನಿಧನಕ್ಕೆ ಸಂತಾಪ ಸೂಚಿಸಿ ಅನೇಕ ಸೆಲೆಬ್ರಿಟಿಗಳು, ಬಿಗ್ ಬಾಸ್ ಮಾಜಿ ಸ್ಪರ್ಧೆಗಳು ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ.
https://www.instagram.com/p/CKGZSz6BlXT/?utm_source=ig_web_copy_link