ಮುಂಬೈ: ಕೊರೊನಾ ಎರಡನೇ ಅಲೆಯ ಕೊನೆ ಹಂತದಲ್ಲೇ ಸೋಂಕು ಮಕ್ಕಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಕೋವಿಡ್ ಅಟ್ಟಹಾಸಕ್ಕೆ ಮುಂಬೈ ಮಹಾನಗರದ ಮಕ್ಕಳು ನಲುಗಿದ್ದು, ಬರೋಬ್ಬರಿ 12,000 ಮಕ್ಕಳಲ್ಲಿ ಸೋಂಕು ಕಂಡು ಬಂದಿದೆ.
’ಫ್ರೆಂಡ್ಸ್’ ಪೋಸ್ಟರ್ ಗೆ ದೇಸೀ ಕಿಚಡಿ ಟ್ವಿಸ್ಟ್
ಈ ಬಗ್ಗೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಬಾಂಬೆ ಹೈಕೋರ್ಟ್ ಗೆ ಮಾಹಿತಿ ನೀಡಿದ್ದು, ಮೇ 9ರವರೆಗೆ ಮುಂಬೈ ನಗರದಲ್ಲಿ 12,000 ಮಕ್ಕಳಲ್ಲಿ ಸೋಂಕು ತಗುಲಿದ್ದು, 17 ಮಕ್ಕಳು ಕೋವಿಡ್ ಗೆ ಬಲಿಯಾಗಿದ್ದಾರೆ. ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಗುಣಮುಖರಾಗುತ್ತಿದ್ದಾರೆ. ಅಲ್ಲದೇ ಮಹಾನಗರದಲ್ಲಿ ಪ್ರಸ್ತುತ ಇಬ್ಬರು ಮಕ್ಕಳು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದೆ.
ಕುಡಿದ ಮತ್ತಿನಲ್ಲಿ ಮತ್ತೊಬ್ಬರ ಮನೆ ಸೋಫಾ ಮೇಲೆ ಗಡದ್ದು ನಿದ್ರೆ…!
ಸಾಂಕ್ರಾಮಿಕ ರೋಗದ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂಬ ಎಚ್ಚರಿಕೆ ಹಿನ್ನೆಲೆಯಲ್ಲಿ ಈಗಾಗಲೇ ಬಿಎಂಸಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಆರೋಗ್ಯ ಮೂಲಸೌಕರ್ಯವನ್ನು ನವೀಕರಿಸಿದೆ. ಮಕ್ಕಳ ಚಿಕಿತ್ಸೆಗಾಗಿ ಪ್ರತ್ಯೇಕ ಬೆಡ್, ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ ಎಂದು ಬಾಂಬೆ ಹೈಕೋರ್ಟ್ ಗೆ ಮಾಹಿತಿ ನೀಡಿದೆ.