alex Certify BIG NEWS: ಹೆಚ್ಚಿದ ಶೀತಗಾಳಿ – ಮದ್ಯಪಾನ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ: ಐಎಂಡಿ ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹೆಚ್ಚಿದ ಶೀತಗಾಳಿ – ಮದ್ಯಪಾನ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ: ಐಎಂಡಿ ಎಚ್ಚರಿಕೆ

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಶೀತಗಾಳಿ ಹೆಚ್ಚುತ್ತಿದ್ದು, ಉತ್ತರ ಭಾರತದ ಜನತೆ ಚಳಿಯಿಂದ ತತ್ತರಿಸಿ ಹೋಗಿದ್ದಾರೆ. ಈ ನಡುವೆ ಹವಾಮಾನ ಇಲಾಖೆ ಆತಂಕಕಾರಿ ಮಾಹಿತಿಯೊಂದನ್ನು ನೀಡಿದೆ.

ಡಿಸೆಂಬರ್ 29ರಿಂದ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನದಲ್ಲಿ ತೀವ್ರ ಶೀತಗಾಳಿ ಬೀಸಲಿದ್ದು, ಇಂಥಹ ಸಂದರ್ಭದಲ್ಲಿ ಮದ್ಯಪಾನ ಮಾಡದಂತೆ ಎಚ್ಚರಿಕೆ ನೀಡಿದೆ.

ಶೀತಗಾಳಿ ಅಥವಾ ಕೋಲ್ಡ್ ವೇವ್ ನಿಂದಾಗಿ ಮೂಗಿನಲ್ಲಿ ರಕಸ್ರಾವದಂತಹ ಆರೋಗ್ಯ ಸಮಸ್ಯೆಯುಂಟಾಗಲಿದೆ. ಈ ವೇಳೆ ಮದ್ಯಪಾನ ಮಾಡಿದರೆ ದೇಹದ ಉಷ್ಣಾಂಶ ಕುಸಿಯುತ್ತದೆ ಹೀಗಾಗಿ ಮದ್ಯಪಾನ ಮಾಡಬೇಡಿ ಎಂದು ಇಲಾಖೆ ತಿಳಿಸಿದೆ. ಅಲ್ಲದೇ ಸಾಧ್ಯವಾದ ಮಟ್ಟಿಗೆ ಮನೆಯೊಳಗೆ ಇರಿ. ವಿಟಮಿನ್ ಸಿ ಇರುವ ಹಣ್ಣನ್ನು ಹೆಚ್ಚು ಸೇವಿಸಿ. ನಿಯಮಿತವಾಗಿ ಮಾಯಿಶ್ಚರೈಸರ್ ಬಳಸಿ ಎಂದು ಸಲಹೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...